ಅಧ್ಯಕ್ಷ: ಉಮೇಶ್ ಸಾಯಿರಾಂ ಉಪಾಧ್ಯಕ್ಷೆ: ಮೀನಾಕ್ಷಿ ಜೊತೆ ಕಾರ್ಯದರ್ಶಿ: ಗಿರೀಶ್ ಎ.ಪಿ., ಗೀತಾ ದಿನೇಶ್
ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಉಮೇಶ್ ಸಾಯಿರಾಂ ಹಾಗೂ ಉಪಾಧ್ಯಕ್ಷರಾಗಿ ಮೀನಾಕ್ಷಿ ಆಯ್ಕೆಯಾದರು.
ಶಾಲೆಯಲ್ಲಿ ಜೂ.24ರಂದು ನಡೆದ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಎ.ಪಿ. ಹಾಗೂ ಗೀತಾದಿನೇಶ್ ಪೂಜಾರಿ ಆಯ್ಕೆಯಾದರು. ಸದಸ್ಯರಾಗಿ ಲಾವಣ್ಯ, ಜಗದೀಶ್, ಪ್ರಶಾಂತ್, ಭಾರತಿ, ವಿನೋದ್ ಕುಮಾರ್ ರೈ, ಸುವಿನಾ, ನೀರಜ್ ಕುಮಾರ್ ಎ, ಚೈತ್ರ ಕೆ.ಆರ್, ಸುನಿತಾ, ಬಾಲಕೃಷ್ಣ, ಸೌಮ್ಯ, ಮೋಹನ್, ವಿಮಲ, ಸುಧಾಕರ ಬಿ, ಸಂತೋಷ್ ಟಿ, ಉಮೇಶ್ ಪೆರ್ಜಿ, ಸರೋಜ, ರತಿ, ಉದಯ ಕುಮಾರ್, ಅಬ್ದುಲ್ ಅಝೀಝ್ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಸಂಸ್ಥೆಯ ಶೈಕ್ಷಣಿಕ ಪ್ರಗತಿ ಹಾಗೂ ಪ್ರಸಕ್ತ ವರ್ಷದ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜರವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಹೆತ್ತವರ ಜವಾಬ್ದಾರಿ ಕುರಿತು ತಿಳಿಸಿದರು.
ಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ.ಅವರು ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರು. ತಾಂತ್ರಿಕ ಸಲಹೆಗಾರರಾದ ಜಯೇಂದ್ರರವರು ವಿಶೇಷವಾಗಿ ಪ್ರಾರಂಭಿಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಕುರಿತ ಮಾಹಿತಿ ನೀಡಿದರು. ವ್ಯವಸ್ಥಾಪಕ ರಮೇಶ್ ರೈ ಆರ್.ಬಿ ಹಾಗೂ 2022-23ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತ ಎ ವಂದಿಸಿದರು. ಸಹಶಿಕ್ಷಕ ರಾಧಾಕೃಷ್ಣ ಬಿ ಕಾರ್ಯಕ್ರಮ ನಿರೂಪಿಸಿದರು.