ನೆಲ್ಯಾಡಿ: ದಿ.ಕುಮಾರಿ ವಾರಿಜ ಮುರಿಯೇಲು ಇವರ ಸ್ಮರಣಾರ್ಥ ಅವರ ಕುಟುಂಬಸ್ಥರು ಹಾಗೂ ಬಂಧುಗಳು ಕಡಬ ತಾಲೂಕಿನ ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ರೂ.10 ಸಾವಿರಕ್ಕಿಂತಲೂ ಅಧಿಕ ವೆಚ್ಚದ ಊಟದ ಬಟ್ಟಲನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಕುಮಾರಿ ವಾರಿಜ ಅವರ ಬಂಧುಗಳಾದ ರಾಮಣ್ಣ ಗೌಡ ಮುರಿಯೇಲು, ಜನಾರ್ದನ ಗೌಡ ಬರಮೇಲು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಊರಿನ ಪ್ರಮುಖರಾದ ಶಿವಪ್ರಸಾದ್ ಶಾಂತಿನಗರ, ಕುಶಾಲಪ್ಪ ನಾಯ್ಕ್, ಜಯಂತ ಅರ್ತಿಗುಳಿ, ವೀಣಾಕುಶಾಲಪ್ಪ ನಾಯ್ಕ್ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲ ಸ್ವಾಗತಿಸಿ, ಶಿಕ್ಷಕ ಮಂಜುನಾಥ ಮಣಕವಾಡ ವಂದಿಸಿದರು. ಶಿಕ್ಷಕಿಯರಾದ ತಾರ, ವೀಕ್ಷಿತಾ, ಪ್ರಮೀಳಾ ಸಹಕರಿಸಿದರು.