ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಗ್ರಾಮ ಸಮಿತಿ ನೆಲ್ಯಾಡಿ ಮತ್ತು ಮಹಿಳಾ ಘಟಕ ನೆಲ್ಯಾಡಿ ಇದರ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜೂ.18ರಂದು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ಗುರುಪೂಜೆ ನಡೆಯಿತು. ಬಳಿಕ ಗ್ರಾಮ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್ರವರು 2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ, ಆದರ್ಶಮತ್ತು ಸಿದ್ಧಾಂತಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಬಿರ್ವ ಹೋಟೆಲ್ನ ಮಾಲಕ ಸಂತೋಷ್ಕುಮಾರ್, ಬಿಲ್ಲವ ಸಂಘದ ಸಂಚಾಲಕಿ ಉಷಾ ಅಂಚನ್ರವರು ಶುಭಹಾರೈಸಿದರು.
ಸನ್ಮಾನ:
ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಸುಂದರ ಬಾಣಜಾಲು, ಧಾರ್ಮಿಕ ಕ್ಷೇತ್ರದ ಸೇವೆಗಾಗಿ ನೋಣಯ್ಯ ಅಂಬರ್ಜೆ, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆಗೈದಿರುವ ರಕ್ಷಾ ಅಂಚನ್ರವರಿಗೆ ಶಾಲು, ಹಾರಾರ್ಪಣೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಉಚಿತ ಪುಸ್ತಕ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಸಹಕರಿಸಿದ ಅಣ್ಣಿ ಪೂಜಾರಿ ಕೌಕ್ರಾಡಿ, ಸಂಕಪ್ಪ ಪೂಜಾರಿ ಕೌಕ್ರಾಡಿ, ಜನಾರ್ದನ ಬಾಣಜಾಲುರವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಮೋಹನ್ಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ಲೋಕೇಶ್ ಬಾಣಜಾಲು ಲೆಕ್ಕಪತ್ರ ಮಂಡಿಸಿ ಉಚಿತ ಪುಸ್ತಕ ವಿತರಣೆ ಪಟ್ಟಿ ವಾಚಿಸಿದರು. ನೋಣಯ್ಯ ಅಂಬರ್ಜೆ ಮತ್ತು ತಂಡದವರು ಭಜನೆ ಮತ್ತು ಗುರುಪೂಜೆ ನಡೆಸಿಕೊಟ್ಟರು. ಉಪಾಧ್ಯಕ್ಷ ವೀರಪ್ಪ ಅಂಬರ್ಜೆ, ಜೊತೆ ಕಾರ್ಯದರ್ಶಿ ಮಹೇಶ್ ಬರೆಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳಸೀಧರನ್, ಸುಂದರ ಬಾಣಜಾಲು, ಶಿವರಾಜ್, ರಕ್ಷಣ್, ಕಿಶೋರ್ ಕೌಕ್ರಾಡಿ, ಚಂದ್ರಶೇಖರ ಬಾಣಜಾಲು, ಸುನೀಶ್, ಜನಾರ್ದನ ಬಾಣಜಾಲು, ತ್ರಿಶನ್ ದೋಂತಿಲ, ರಕ್ಷಾ ಅಂಚನ್ ಸಹಕರಿಸಿದರು. ಲಿಥಿನ್ ಕೊಣಾಲು, ದೀಕ್ಷಾ ಸಾಲಿಯಾನ್, ಪದ್ಮಾವತಿ, ಲೀಲಾವತಿ ಪರಂತಮೂಲೆ, ಅನಿತಾ ಸುರೇಶ್, ಉಷಾ, ಅನಿತಾ, ಕುಸು, ಪ್ರತಿಮ, ವಿಶ್ವನಾಥ ಪೂಜಾರಿ, ವಸಂತ ಪೊಸೊಳಿಗೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷ ಮೋಹನ್ ಕುಮಾರ್ ದೋಂತಿಲ ಅವರು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಬಯಸಿದರು. ಡಾ.ಸದಾನಂದ ಕುಂದರ್ ಸ್ವಾಗತಿಸಿದರು. ನಿಯೋಜಿತ ಕಾರ್ಯದರ್ಶಿ ಜನಾರ್ದನ ಬಾಣಜಾಲು ವಂದಿಸಿದರು. ದೀಪ್ತಿ, ಶ್ರೀರಕ್ಷಾ, ಕೃತಿಕಾ ಪ್ರಾರ್ಥಿಸಿದರು.