ಕಾಂಚನ ಶ್ರೀ ಲಕ್ಷ್ಮೀನಾರಾಯಣ ಶಾಲಾ ಮಂತ್ರಿಮಂಡಲ ರಚನೆ

0

ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮುಖ್ಯಗುರುಗಳ ಮಾರ್ಗದರ್ಶನದಂತೆ ಶಾಲಾ ಮಂತ್ರಿಮಂಡಲದ ಆಯ್ಕೆಗಾಗಿ ವಿದ್ಯಾರ್ಥಿಗಳ ಮತದಾನ ಕಾರ್ಯಕ್ರಮ ನಡೆಸಲಾಯಿತು.


ಈ ಮತದಾನದಲ್ಲಿ 4ನೇ ತರಗತಿಯಿಂದ 7ನೇ ತರಗತಿಯ ವಿದ್ಯಾರ್ಥಿಗಳು ಮತದಾನ ಮಾಡುವ ಹಕ್ಕನ್ನು ಪಡೆದುಕೊಂಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಮೂವರು ವಿದ್ಯಾರ್ಥಿಗಳು ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ 9 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ಶಿಕ್ಷಕರು ಮತಗಟ್ಟೆಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಮುಖ್ಯಮಂತ್ರಿಯಾಗಿ ರತನ್ (7ನೇ) ತರಗತಿ ಹಾಗೂ ಉಪಮುಖ್ಯಮಂತ್ರಿಯಾಗಿ ನಿಶಾಂತ್ 6ನೇ ತರಗತಿ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಪ್ರಣವಿ (7ನೇ) , ಆರೋಗ್ಯ ಮಂತ್ರಿಯಾಗಿ ಧನ್ಯ ಶ್ರೀ ಹಾಗೂ ಸಾನ್ವಿ (6ನೇ) , ಸಾಂಸ್ಕೃತಿಕ ಮಂತ್ರಿಯಾಗಿ ಅಭೀಕ್ಷ (6ನೇ) ತೋಟಗಾರಿಕಾ ಮಂತ್ರಿಯಾಗಿ ವೈಶಾಖ (7ನೇ), ಕ್ರೀಡಾ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ಚರಣ್ (7ನೇ) , ಶೋಧನಾ ಮಂತ್ರಿಯಾಗಿ ರಕ್ಷನ್ (7ನೇ) , ರಕ್ಷಣಾ ಮಂತ್ರಿಯಾಗಿ ಆಕಾಶ್ (7ನೇ), ಸ್ವಚ್ಛತಾ ಮಂತ್ರಿಯಾಗಿ ಸ್ವಾತಿ (7ನೇ) , ನೀರಾವರಿ ಮಂತ್ರಿಯಾಗಿ ಭವತ್ (7ನೇ), ಸಾರಿಗೆ ಮಂತ್ರಿಯಾಗಿ ಆಕಾಶ್ (7ನೇ) , ಆಹಾರ ಮಂತ್ರಿಯಾಗಿ ಕುಶಾಲ್ (7ನೇ), ಗ್ರಂಥಾಲಯ ಮಂತ್ರಿಯಾಗಿ ತ್ರಿಷಾ (6ನೇ) , ಸಭಾಪತಿಯಾಗಿ ಮೊಕ್ಷಿತ್ (7ನೇ) ಅವರು ಬಹುಮತದಿಂದ ಆಯ್ಕೆಯಾದರು.

LEAVE A REPLY

Please enter your comment!
Please enter your name here