ಸುದಾನದಲ್ಲಿ ಭತ್ತದ ಕೃಷಿ ಮತ್ತು ಮಾಹಿತಿ ಕಾರ್ಯಗಾರ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜೂನ್ 26 ರಂದು ವಿದ್ಯಾರ್ಥಿಗಳಿಗಾಗಿ ಭತ್ತದ ಕೃಷಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಶಾಲೆಯ ಆವರಣದಲ್ಲಿರುವ ಉಳುಮೆ ಮಾಡಿದ ಗದ್ದೆಯಲ್ಲಿ, ಬಿತ್ತನೆ ಕಾರ್ಯವನ್ನು ಮಾಡುವ ಮೂಲಕ ಪ್ರಗತಿಪರ ಕೃಷಿಕ ಸುದೇಶ್ ಚಾಲನೆ ನೀಡಿ ಗದ್ದೆಯ ಉಳುಮೆ, ಬಿತ್ತನೆಯಿಂದ ತೊಡಗಿ ಕೊಯ್ಲಿನವರೆಗೆ ಪಾಲಿಸಬೇಕಾದ ನಿಯಮಗಳ ಬಗೆಗೆ, ವಿವಿಧ ಬೆಳೆ ಬೆಳೆಯುವ ಬಗೆಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ವಿಜಯ ಹಾರ್ವಿನ್ ಪ್ರಗತಿಪರ ಕೃಷಿಕ ಸುದೇಶ್‌ರನ್ನು ಸನ್ಮಾನಿಸಿದರು. ‘ರೈತನು ದೇಶದ ಬೆನ್ನೆಲುಬು. ಆತನ ಶ್ರಮದಿಂದಾಗಿ ನಾವು ಆಹಾರವನ್ನು ಪಡೆಯುತ್ತಿದ್ದೇವೆ. ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಆಸಕ್ತರಾಗಬೇಕು. ದೇಶದ ಅಭಿವೃದ್ಧಿಗೆ ಇದು ಸಹಕಾರಿ’ ಎಂದು ಹಿತನುಡಿಗಳನ್ನಾಡಿದರು. ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್, ಸಂಯೋಜಕಿ ಪ್ರತಿಮಾ ಎನ್. ಜಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ರಂಜಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ವಿಜ್ಞಾನ ಸಂಘವಾದ ‘ಅವನಿ’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

LEAVE A REPLY

Please enter your comment!
Please enter your name here