ಕೆಯ್ಯೂರು: ದ.ಕ.ಹಾಲು ಒಕ್ಕೂಟ ಮಂಗಳೂರು ಇದರ ವತಿಯಿಂದ ಕೆಯ್ಯೂರು ಹಾಲು ಉತ್ಪಾದಕರ ಸಂಘದಲ್ಲಿ ಹೆಣ್ಣು ಕರುಗಳ ಸಾಕಾಣಿಕಾ 2023-24ರ ಯೋಜನೆಯು ಜೂ27ರಂದು ಕೆಯ್ಯೂರು ಹಾಲು ಉತ್ಪಾದಕರ ಸಂಘದ ವಠಾರದಲ್ಲಿ ನಡೆಯಿತು.
ಉದ್ಘಾಟನೆಯನ್ನು ದೀಪ ಪ್ರಜ್ವಲಿಸುವ ಮೂಲಕ ದ.ಕ.ಹಾಲು ಒಕ್ಕೂಟ ಮಂಗಳೂರು ನಿರ್ದೇಶಕ ನಾರಾಯಣ ಪ್ರಕಾಶ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೆಯ್ಯೂರು ಹಾಲು ಉತ್ಪಾದಕರ ಸಂಘದ ಅದ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪ್ರಾಸ್ತಾವಿಕವಾಗಿ ದ.ಕ.ಉಪವ್ಯವಸ್ಥಾಪಾಕ ಡಾ.ಸತೀಶ್ ರಾವ್ ಮಾತಾಡಿದರು. ಹೆಣ್ಣು ಕರುಗಳ ಸಾಕಾಣಿಕಾ ಯೋಜನೆಯಲ್ಲಿ ರೈತರಿಗೆ ಸಿಗುವ ಮಾಹಿತಿಯನ್ನು ಪಶುವೈದ್ಯ ಡಾ. ಅನುದೀಪ್ ನೀಡಿದರು. ವೇದಿಕೆಯಲ್ಲಿ ಕೆಯ್ಯೂರು ಹಾಲು ಉತ್ಪಾದಕರ ಸಂಘದ ಉಪಾದ್ಯಕ್ಷ ಬಿ.ಚಂದ್ರಹಾಸ ರೈ ಉಪಸ್ಥಿತಿಯಿದ್ದರು. ಈ ಸಂದರ್ಭದಲ್ಲಿ ವಿನಯಚಂದ್ರ, ಮೋಹನ್ ರೈ ಬೇರಿಕೆ, ರಾಮಾಣ್ಣ ಗೌಡ ಮಾಡಾವು, ದಿವಾಕರ ಬಂಗೇರ, ಈಶ್ವರಿ.ಜೆ ರೈ ಸಂತೋಷ್ ನಗರ, ರಘಚಂದ್ರ ಭಟ್ ಪ್ರವೀಣ್ ಕಣಿಯಾರು ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಲಾಯಿತು. ಕೆಯ್ಯೂರು ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಪದಯ್ಯ ಪಿ. ಪ್ರಾರ್ಥಿಸಿ, ದ.ಕ.ಹಾಲು ಒಕ್ಕೂಟ ವಿಸ್ತಾರಣಾಧಿಕಾರಿ ನಾಗೇಶ್ ಸ್ವಾಗತಿಸಿ, ಕಾರ್ಯದರ್ಶಿ ಬಾಸ್ಕರ ರೈ ವಂದಿಸಿದರು. ಸಿಬ್ದಂದಿಗಳಾದ ಲಲಿತ ರೈ ಮಾಡಾವು, ಪ್ರಶಾಂತ ಕುಮಾರ್ , ರೋಹಿತಾಕ್ಷ ರೈ ಸಹಕರಿಸಿದರು.