ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

0

ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮುಖ್ಯ : ರಾಜಶ್ರೀ ಎಸ್. ನಟ್ಟೋಜ


ಪುತ್ತೂರು: ವಿದ್ಯಾರ್ಥಿಗಳು ರಾಷ್ಟ್ರ ಬೆಳಗುವ ವ್ಯಕ್ತಿಗಳಾಗಿ ಹೊರಹೊಮ್ಮಲು ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ಅತಿಮುಖ್ಯ. ಅಂತಹ ಮಾರ್ಗದರ್ಶನ ನೀಡಬೇಕಾದರೆ ಶಿಕ್ಷಕರು ತಮ್ಮನ್ನು ತಾವು ಅಭಿವೃದ್ಧಿ ಮಾಡಿಕೊಳ್ಳುತ್ತಿರಬೇಕು. ನಮ್ಮಲ್ಲಿನ ಜ್ಞಾನ ಹಾಗೂ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ತರಬೇತಿ ಅತ್ಯಗತ್ಯ. ನಾಳಿನ ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು. ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶಿಕ್ಷಕರಿಗಾಗಿ ಆಯೋಜಿಸಲಾದ ತರಬೇತಿ ಶಿಬಿರವನ್ನು ಜೂ.26ರಂದು ಉದ್ಘಾಟಿಸಿ ಮಾತನಾಡಿದರು.


ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರ ಹಾಗೂ ನಿಟ್ಟೆಯ ಎನ್ ಶಂಕರ ಅಡ್ಯಂತಾಯ ಮೆಮೋರಿಯಲ್ ಇಂಗ್ಲೀಷ್ ಹೈಸ್ಕೂಲ್ ಸಂಸ್ಥೆಯ ಪ್ರಾಂಶುಪಾಲೆ ರಾಧಾ ಪ್ರಭು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಸತ್ಯಸಾಯಿ ವಿದ್ಯಾ ಕೇಂದ್ರ ಅಳಿಕೆ, ಶಾರದಾ ಶುಭೋದಯ ವಿದ್ಯಾಲಯ ಮಂಗಳೂರು ಹಾಗೂ ಅಂಬಿಕಾ ಸಿಬಿಎಸ್ಸಿ ವಿದ್ಯಾಲಯದ ಶಿಕ್ಷಕರು ಭಾಗಿಯಾದರು. . ಶಿಕ್ಷಕಿಯರಾದ ಕೃತಿಕಾ ಕಾರ್ಯಕ್ರಮ ನಿರೂಪಿಸಿ, ಮಲ್ಲಿಕಾ ವಂದಿಸಿದರು

LEAVE A REPLY

Please enter your comment!
Please enter your name here