ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ 4ನೇ ವರ್ಷಕ್ಕೆ ಪಾದಾರ್ಪಣೆ- ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ

0
  • ಸಂಘದ ನೂತನ 9ನೇ ಶಾಖೆ ಜು.6ರಂದು ಬೆಳ್ಳಾರೆಯಲ್ಲಿ ಶುಭಾರಂಭ: ಚಿದಾನಂದ ಬೈಲಾಡಿ

ಆಲಂಕಾರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇವರ ಪ್ರಾಯೋಜಕತ್ವದ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಸಂಕೀರ್ಣದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಆಲಂಕಾರು ಶಾಖೆಯು ಯಶಸ್ವಿ 4ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಆಲಂಕಾರು ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಚೇರಿಯಲ್ಲಿ ಜೂ.27ರಂದು ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು.


ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಅವರ ಪೌರೋಹಿತ್ಯದಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು. ನಂತರ ನಡೆದ ಸರಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿಯವರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 2002ರಲ್ಲಿ ಆರಂಭಗೊಂಡು ಅನಂತರದ ಅವಧಿಯಲ್ಲಿ 8 ಶಾಖೆಗಳನ್ನು ಆರಂಭಿಸಿದೆ. ಎಲ್ಲಾ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿವೆ. ಸಂಘದ ನೂತನ 9ನೇ ಶಾಖೆ ಜು.6ರಂದು ಬೆಳ್ಳಾರೆಯಲ್ಲಿ ಆರಂಭಗೊಳ್ಳಲಿದೆ ಎಂದರು.

ಸಂಘವು ರೂ.400 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ಹೊಂದಿದೆ. ಶೇ.99ರಷ್ಟು ಸಾಲ ವಸೂಲಾತಿ ಮಾಡಿದೆ. ವಾರ್ಷಿಕ ರೂ.1 ಕೋಟಿಗೂ ಹೆಚ್ಚು ಲಾಭ ಗಳಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಆಲಂಕಾರು ಶಾಖೆಯು ರೂ.37 ಕೋಟಿಗೂ ಅಧಿಕ ವ್ಯವಹಾರ ನಡೆಸಿದೆ. ಶೇ.100ರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ಆಲಂಕಾರು ಶಾಖೆಯು ಅತ್ಯುತ್ತಮ ಮಟ್ಟದ ಸಾಧನೆ ಮಾಡಿದೆ. ಈ ಸಾಧನೆಗೆ ಕಾರಣರಾದ ಸಲಹಾ ಸಮಿತಿ ಸದಸ್ಯರಿಗೆ, ಸಿಬ್ಬಂದಿ ವರ್ಗಕ್ಕೆ, ಗ್ರಾಹಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಯು.ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ, ಆಲಂಕಾರು ಶಾಖೆಯ ಸಲಹಾ ಸಮಿತಿ ಅಧ್ಯಕ್ಷೆ, ಸಂಘದ ನಿರ್ದೇಶಕಿಯೂ ಆದ ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ, ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ರಾಮಕೃಷ್ಣ ಗೌಡ ಕರ್ಮಲ, ಸಂಜೀವ ಗೌಡ ಕುದ್ಲೂರು, ಸತೀಶ ಪಾಂಬಾರು, ಪ್ರವೀಣ್ ಕುಂಟ್ಯಾನ, ಸುಪ್ರಿತಾರವಿಚಂದ್ರ, ಮಾಜಿ ನಿರ್ದೇಶಕರಾದ ಶಿವರಾಮ ಗೌಡ ಇಡ್ಯಪೆ, ಸಾಂತಪ್ಪ ಗೌಡ ಪಿಜಕ್ಕಳ, ಲಿಂಗಪ್ಪ ಗೌಡ ಕಡೆಂಬ್ಯಾಲ್, ಕಡಬ ಶಾಖಾ ಸಲಹಾ ಸಮಿತಿ ಸದಸ್ಯ ವಿಶ್ವನಾಥ ಇಡಾಲ, ಕುಂಬ್ರ ಶಾಖೆಯ ಸಲಹಾ ಸಮಿತಿ ಸದಸ್ಯ ಶ್ರೀಧರ ಗೌಡ ಅಂಗಡಿಹಿತ್ಲು, ಆಲಂಕಾರು ಶಾಖೆಯ ಸಲಹಾ ಸಮಿತಿ ಗೌರವ ಸಲಹೆಗಾರರಾದ ನಾಗಪ್ಪ ಗೌಡ ಮರುವಂತಿಲ, ಈಶ್ವರ ಗೌಡ ಪಜ್ಜಡ್ಕ, ಸದಸ್ಯರಾದ ಚಕ್ರಪಾಣಿ ಬಾಕಿಲ, ರಾಮಣ್ಣ ಗೌಡ ಬಿ ದೋಳ, ಅಶೋಕ ಗೌಡ ಪಜ್ಜಡ್ಕ, ಶೇಖರ ಗೌಡ ಕಟ್ಟಪುಣಿ, ಶಿವಣ್ಣ ಗೌಡ ಕಕ್ವೆ, ಕೇಶವ ಗೌಡ ಆಲಡ್ಕ, ದಯಾನಂದ ಗೌಡ ಆಲಡ್ಕ, ವೀರೇಂದ್ರ ಗೌಡ ಪಾಲೆತಡ್ಡ, ಸದಾನಂದ ಗೌಡ ಕುಂಟ್ಯಾನ, ರಾಮಣ್ಣ ಗೌಡ ಸುರುಳಿ, ಬಾಲಕೃಷ್ಣ ಗೌಡ ಸಂಪ್ಯಾಡಿ, ತಿಮ್ಮಪ್ಪ ಗೌಡ ಸಂಕೇಶ, ಸುಂದರ ಗೌಡ ಕುಂಡಡ್ಕ, ಸುಂದರ ಗೌಡ ನೆಕ್ಕಿಲಾಡಿ, ಮಂಜಪ್ಪ ಗೌಡ ಕಜೆ, ಭವಾನಿ ಗೌಡ ಪರಂಗಾಜೆ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಆಲಂಕಾರು ಶಾಖೆ ಮೇನೇಜರ್ ದೀಪಾ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಮೇನೇಜರ್ ಆನಂದ ಗೌಡ ಪಜ್ಜಡ್ಕ, ಆಲಂಕಾರು ಜೆಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಆಲಂಕಾರು ಶ್ರೀ ದುರ್ಗಾ ಟವರ್‍ಸ್‌ನ ಮಾಲಕ ರಾಧಾಕೃಷ್ಣ ರೈ, ಗ್ರಾಹಕರಾದ ಕುಶಾಲಪ್ಪ ಗೌಡ ಸುರುಳಿ, ದೇವಪ್ಪ ಗೌಡ ಬರೆಂಬೆಟ್ಟು, ಯುವರಾಜ್, ಗಂಗಯ್ಯ ಗೌಡ, ವಿಠಲ ರೈ, ನಾರ್ಣಪ್ಪ ಗೌಡ, ಗೋಪಣ್ಣ ಗೌಡ, ಶಿವಾಲಿ ಡ್ರೆಸಸ್‌ನ ಯೋಗೀಶ್, ಮೋಹನ್ ಕುಮಾರ್, ಶಶಿಕಿರಣ್, ಅಬೂಬಕ್ಕರ್, ಅಬ್ದುಲ್ ರಝಾಕ್ ಸೊಂಪಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆಯ ಮೇನೇಜರ್ ಶಿವಪ್ರಸಾದ್, ನೆಲ್ಯಾಡಿ ಶಾಖೆಯ ಮೇನೇಜರ್ ವಿನೋದ್‌ರಾಜ್, ಕುಂಬ್ರ ಶಾಖೆಯ ಮೇನೇಜರ್ ಹರೀಶ್, ಕಾಣಿಯೂರು ಶಾಖೆಯ ಮೇನೇಜರ್ ಪದ್ಮಶ್ರೀ, ಕಡಬ ಶಾಖೆಯ ಸಿಬ್ಬಂದಿ ರಾಧಾಕೃಷ್ಣ, ಉಪ್ಪಿನಂಗಡಿ ಶಾಖೆಯ ಸಿಬ್ಬಂದಿ ಚೇತನ್‌ಕುಮಾರ್, ಎಪಿಎಂಸಿ ಶಾಖೆಯ ಸಿಬ್ಬಂದಿ ಯಶ್ವಿತ್ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.


ಶಾಖಾ ಸಲಹಾ ಸಮಿತಿ ಅಧ್ಯಕ್ಷೆ ತೇಜಸ್ವಿನಿ ಕಟ್ಟಪುಣಿ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕಿ ರೇವತಿ ಹೆಚ್.ವಂದಿಸಿದರು. ಶಾಖಾ ಸಿಬ್ಬಂದಿಗಳಾದ ವಿಜಯಕುಮಾರ್, ಹರಿಶ್ಚಂದ್ರ, ಪಿಗ್ಮಿ ಸಂಗ್ರಾಹಕರಾದ ನವೀನ್, ಭವಿತ್‌ರಾಜ್, ಯೋಗೀಶ್ ಸಹಕರಿಸಿದರು.

LEAVE A REPLY

Please enter your comment!
Please enter your name here