13 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೀರಿ, 4 ಬಾರಿ ಸೋತಿದ್ದೀರಿ ಆದರೂ ಗೆದ್ದು ಮತ್ತೆ ಸಿಎಂ ಆಗಿದ್ದೀರಿ ?ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನೆ

0

ಪುತ್ತೂರು: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ನೂತನ ಶಾಸಕರಿಗೆ ತರಬೇತಿ ಕಾರ್ಯಕ್ರಮದ ಕೊನೇಯ ದಿನವಾದ ಜೂ. 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ನೂತನ ಶಾಸಕರ ಜೊತೆ ಒಂದಷ್ಟು ಸಮಯವನ್ನು ಕಳೆದಿದ್ದಾರೆ. ನೂತನ ಶಾಸಕರು ವಿವಿಧ ಪ್ರಶ್ನೆಗಳನ್ನು ಸಿಎಂ ಬಳಿ ಕೇಳಿದ್ದಾರೆ. ಸಿದ್ದರಾಮಯ್ಯ ಅವರ ಬಳಿ ಅವರ ವೈಯುಕ್ತಿಕ ಪ್ರಶ್ನೆಯನ್ನು ಕೇಳಲು ಅವಕಾಶವನ್ನು ನೀಡಲಾಗಿತ್ತು. ಈ ವೇಳೆ ಪುತ್ತೂರು ಶಾಸಕ ಅಶೋಕ್ ರೈ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನೀವು ವಿಧಾನಸಭಾ ಚುನಾವಣೆಯಲ್ಲಿ 13 ಬಾರಿ ಸ್ಪರ್ಧೆ ಮಾಡಿದ್ದೀರಿ, ನಾಲ್ಕು ಬಾರಿ ಸೋತಿದ್ದೀರಿ. ಆದರೂ ಮತ್ತೆ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಜನರ ನಡುವೆ ಇದ್ದಾಗ, ಜನರ ಕಷ್ಟಸುಖಗಳಿಗೆ ಸ್ಪಂಧಿಸಿದಾಗ, ಜನರ ದ್ವನಿಯಾಗಿ ಕೆಲಸ ಮಾಡಿದ್ದಾಗ, ರೂಲಿಂಗ್ ಪಾರ್ಟಿ ಇರಲಿ, ವಿರೋಧ ಪಕ್ಷದಲ್ಲೇ ಇರಲಿ ನಿಮ್ಮನ್ನು ಜನ ಯಾವತ್ತೂ ಕೈ ಬಿಡಲ್ಲ. ಕೆಲವು ಸಾರಿ ನಮ್ಮ ತಪ್ಪುಗಳಿಂದ ಸೋತಿರುತ್ತೇವೆ, ಕೆಲವು ಬಾರಿ ಜನರಿಗೆ ನಮ್ಮ ಮೇಲೆ ಬೇಸರವಾಗಿರುತ್ತದೆ ಅದಕ್ಕೆ ಸೋತಿರುತ್ತೇವೆ. ಸೋಲಲಿ, ಗೆಲ್ಲಲಿ ಆದರೆ ಜನ ಮಾತ್ರ ನಮ್ಮ ಜೊತೆ ಇರ್‍ತಾರೆ, ನನ್ನ ಜೊತೆ ಇದ್ರು. ಇದು ನನ್ನ ಕೊನೇ ಚುನಾವಣೆ ಆ ಬಳಿಕವೂ ನಾನು ಜನರ ಜೊತೆನೆ ಇರ್‍ತೀನಿ, ಸಕ್ರೀಯ ರಾಜಕಾರಣದಲ್ಲಿ ಇರ್‍ತೀನಿ, ಜನರ ದ್ವನಿಯಾಗಿ ಕೆಲಸ ಮಾಡಲು ಶಾಸಕನೇ ಆಗಿರಬೇಕೆಂದಿಲ್ಲ ಎಂದು ಉತ್ತರವನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here