ಅರಿಯಡ್ಕ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ – ಪುಸ್ತಕ ವಿತರಣೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಅರಿಯಡ್ಕ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ, ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಅರಿಯಡ್ಕ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾದ ಚಿದಾನಂದ ಪೂಜಾರಿ ಮಣ್ಣಪುರವರ ಅಧ್ಯಕ್ಷತೆಯಲ್ಲಿ ಜೂ.24 ರಂದು ಮಜ್ಜಾರಡ್ಕ ಶ್ರೀ ವಿಷ್ಣು ಸಭಾಭವನದಲ್ಲಿ ನಡೆಯಿತು.
ಪುತ್ತೂರು ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಡಾ. ಸದಾನಂದ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಪುತ್ತೂರು ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಪುತ್ತೂರು ತಾಲೂಕು ಯುವವಾಹಿನಿ ಘಟಕದ ಅದ್ಯಕ್ಷ ಉಮೇಶ್ ಬಾಯಾರು, ಪುತ್ತೂರು ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶ್ಚಂದ್ರ ಸಾಲಿಯಾನ್, ಕುಂಬ್ರ ಸುಶಾ ಡ್ರೆಸಸ್ಸ್ ನ ಮ್ಹಾಲಕರಾದ ಸುರೇಶ್ ತಿಂಗಳಾಡಿ. ಅರಿಯಡ್ಕ ಮಹಿಳಾ ವೇದಿಕೆ ಅಧ್ಯಕ್ಷೆ ಯಶೋಧ ಪದ್ಮನಾಭ ಮಜ್ಜಾರು, ಗಿರೀಶ್ ಪುಜಾರಿ ಮಜ್ಜಾರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುಸ್ತಕ ವಿತರಣೆ: ಕುಂಬ್ರ ಸುಶ ಡ್ರೆಸಸ್ಸ್ ನ ಮ್ಹಾಲಕರಾದ ಸುರೇಶ್ ತಿಂಗಳಾಡಿ, ಅನೀಶ್ ಪೂಜಾರಿ ದೇರ್ಲ, ಗಿರೀಶ್ ಪೂಜಾರಿ ಮಾಜ್ಜಾರ್, ಮನೋಜ್ ಡ್ರೈವಿಂಗ್ ಸ್ಕೂಲ್ ಕುಂಬ್ರದ ಜಯರಾಮ ಪೂಜಾರಿ ಕುಕ್ಕುತ್ತಡಿಯವರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.

ಪಧಾಧಿಕಾರಿಗಳ ಆಯ್ಕೆ:
ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಭರತ್ ಪೂಜಾರಿ ಒಳ್ತಾಜೆ, ಉಪಾಧ್ಯಕ್ಷರಾಗಿ ರಮೇಶ್ ದರ್ಬೆತ್ತಡ್ಕ, ಕಾರ್ಯದರ್ಶಿಯಾಗಿ ಯಶೋಧ ಪದ್ಮನಾಭ ಮಜ್ಜಾರು, ಜೊತೆಕಾರ್ಯದರ್ಶಿಯಾಗಿ ಜನಾರ್ದನ ಬಳ್ಳಿಕಾನ, ಕೋಶಾಧಿಕಾರಿಯಾಗಿ ಗುರುಪ್ರಸಾದ್ ಮಜ್ಜಾರ್, ಮಹಿಳಾ ವೇದಿಕೆ ಆಧ್ಯಕ್ಷೆ ಶಮಿಲತ ಗೋಳ್ತಿಲಾ, ಉಪಾಧ್ಯಕ್ಷೆಯಾಗಿ ಗೀತಾ ಬಳ್ಳಿಕಾನ, ಕಾರ್ಯದರ್ಶಿಯಾಗಿ ಯಶಸ್ವಿನಿ ಕೊಂಬರಡ್ಕ, ಜೊತೆ ಕಾರ್ಯದರ್ಶಿಯಾಗಿ ಸೌಮ್ಯ ಜನಾರ್ದನ ಮಜ್ಜಾರು, ಕೋಶಾಧಿಕಾರಿಯಾಗಿ ರಮ್ಯಾ ಸತೀಶ್ ಮಜ್ಜಾರ್ ರವರನ್ನುಆಯ್ಕೆ ಮಾಡಲಾಯಿತು.
ಯಶೋಧ ಪದ್ಮನಾಭ ಮಜ್ಜರ್ ವರದಿ ವಾಚಿಸಿದರು. ವಿಖ್ಯಾತ್ ಪೂಜಾರಿ ಮಜ್ಜಾರು ಪ್ರಾರ್ಥಿಸಿದರು. ಶಮಿಲತಾ ಗೋಳ್ತಿಲ ಸ್ವಾಗತಿಸಿದರು. ಭಾರತ್ ಪೂಜಾರಿ ವೊಳ್ತಾಜೆ ನಿರೂಪಿಸಿ, ಪ್ರತಿಕ್ ಪೂಜಾರಿ ಆಕಾಯಿಯವರು ಧನ್ಯವಾದಿಸಿದರು. ಚಿದಾನಂದ ಪೂಜಾರಿ ಮನ್ನಾಪು, ಚಂದ್ರಶೇಖರ ಪೂಜಾರಿ ಕುತ್ಯಾಡಿ, ಜನಾರ್ಧನ ಬಳ್ಳಿಕಾನ, ಶೇಷಮ್ಮ ವಾಸು ಪೂಜಾರಿ ಗುಂಡಿಯಡ್ಕ, ವನಿತಾ ಸುರೇಶ್ ಪೂಜಾರಿ ಅಕೈ, ಯಶೋಧ ಪದ್ಮನಾಭ ಮಜ್ಜಾರ್, ಲೋಕವತಿ ಕೊಂಬರಡ್ಕ ಮತ್ತು ಸೌಮ್ಯ ಜನಾರ್ಧನ್ ಮಾಜ್ಜರ್ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದರು.

LEAVE A REPLY

Please enter your comment!
Please enter your name here