ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ Are You FIT ತರಬೇತಿ ಕಾರ್ಯಕ್ರಮ

0

ರಾಮಕುಂಜ: ಆರ್ಥಿಕ ವ್ಯವಹಾರ ಕ್ಷಮತೆ, ಕೌಶಲ ಪೂರ್ಣತೆ ಹಾಗೂ ಆಧುನಿಕ ತಂತ್ರಜ್ಞಾನದ ಅರಿವು ಎಂಬ ಈ ಗುಣಗಳನ್ನು ವರ್ತಮಾನದ ಪದವೀಧರರು ಹೊಂದಿದಾಗಲೇ ಅವರು ರಾಷ್ಟ್ರ ನಿರ್ಮಾಣದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ತರಬೇತುದಾರ ಡಾ. ರಾಜೇಶ್ ಹೇಳಿದರು. ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಐಕ್ಯೂಎಸಿ ವತಿಯಿಂದ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಾಂಪ್ರದಾಯಿಕ ವಿಷಯಗಳ ಅರಿವಿನೊಂದಿಗೆ ಆಧುನಿಕ ಜಗತ್ತಿನ ಬೇಡಿಕೆ, ಆವಶ್ಯಕತೆಗಳಿಗೆ ಅನುಗುಣವಾಗಿ ಬೆಳೆಯುವ ಮನೋಭಾವ ಯುವಕರಲ್ಲಿರಬೇಕು. ಮೊದಮೊದಲಿಗೆ ಇದು ಶ್ರಮದಾಯಕವೆನಿಸಿದರೂ ಅನಂತರ ಉತ್ತಮ ಪ್ರತಿಫಲ ನೀಡಲಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಚಾಣಕ್ಯ ವಿಶ್ವವಿದ್ಯಾನಿಲಯದ ವಿಸ್ತರಣಾಧಿಕಾರಿ ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ನೂತನ ವಿಶ್ವವಿದ್ಯಾನಿಲಯದ ಪರಿಚಯವನ್ನು ಮಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ವಹಿಸಿ ಮಾತಾಡಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಕೃಷ್ಣಪ್ರಸಾದ್ ನಿರೂಪಿಸಿದರು. ಪ್ರಾಧ್ಯಾಪಕರಾದ ದಯಾನಂದ್, ಶ್ರಿಮತಿ ರಮ್ಯ ಉಪಸ್ಥಿತರಿದ್ದರು. ಅಂತಿಮ ಪದವಿ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here