ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಆಗಿ ನರಸಿಂಹ ಪೈ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಆಗಿ ರೋಟರಿ ಕ್ಲಬ್ ಪುತ್ತೂರು ಯುವದ ಮಾಜಿ ಅಧ್ಯಕ್ಷ ನರಸಿಂಹ ಪೈಯವರು ಆಯ್ಕೆಯಾಗಿದ್ದಾರೆ.

ದರ್ಬೆ ಗಣೇಶ್ ಟ್ರೇಡರ್ಸ್ ಮಾಲಕ ವಾಮನ ಪೈ ಹಾಗೂ ಅನುರಾಧಾ ವಿ. ಪೈಯವರ ಪುತ್ರನಾಗಿರುವ ನರಸಿಂಹ ಪೈಯವರು ತಮ್ಮ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಪೂರೈಸಿದ್ದರು. ಬಳಿಕ ಬಿಇ ಸಿವಿಲ್ ಪದವಿಯನ್ನು ವಿವೇಕಾನಂದ ಸಂಸ್ಥೆಯಲ್ಲಿ ಮತ್ತು ಮಾಸ್ಟರ್ಸ್ ಇನ್ ಕ್ಯಾಡ್ ಸ್ಟ್ರಕ್ಚರ್ಸ್(ಎಂಟೆಕ್) ಅನ್ನು ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪಡೆದರು. ಪ್ರಸ್ತುತ ಹಾರ್ಡ್ ವೇರ್ಸ್, ಪ್ಲಂಬಿಂಗ್, ಪೈಂಟ್ಸ್, ಸ್ಯಾನಿಟರಿವೇರ್, ಟೈಲ್ಸ್ ನ್ನೊಳಗೊಂಡ ದರ್ಬೆ ಗಣೇಶ್ ಟ್ರೇಡರ್ಸ್ ನ ಪಾಲುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಯುವದ ದ್ವಿತೀಯ ವರ್ಷದ ಅಧ್ಯಕ್ಷರಾಗಿ, 2019-20ರಲ್ಲಿ ವಲಯ ಸೇನಾನಿಯಾಗಿ ಸೇವೆ ಸಲ್ಲಿಸಿರುತ್ತಾರೆ. ನರಸಿಂಹ ಪೈಯವರಿಗೆ ಕ್ರೀಡೆಗಳಾದ ಕ್ರಿಕೆಟ್, ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಅನ್ನು ಹವ್ಯಾಸಗಳಾಗಿದ್ದು, ಪತ್ನಿ ಸಂಧ್ಯಾ ಎನ್.ಪೈಯವರನ್ನು ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here