ಪುತ್ತೂರು:ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕಬಕಕಾರ್ಸ್, ಕಾರ್ಯದರ್ಶಿಯಾಗಿ ಆಸ್ಕರ್ ಆನಂದ್, ಕೋಶಾಧಿಕಾರಿಯಾಗಿ ಸಿಲ್ವಿಯಾ ಡಿ’ಸೋಜರವರು ಅಧಿಕಾರ ಸ್ವೀಕರಿಸಲಿದ್ದಾರೆ.
ಇತರ ಪದಾಧಿಕಾರಿಗಳಾಗಿ ನಿಯೋಜಿತ ಅಧ್ಯಕ್ಷರಾಗಿ ಅಶ್ವಿನ್ ಎಲ್.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾಗಿ ಹಾಗೂ ಬುಲೆಟಿನ್ ಎಡಿಟರ್ ಆಗಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಉಪಾಧ್ಯಕ್ಷರಾಗಿ ಕಾರ್ಯಪ್ಪ ವಿ.ಪಿ, ಸಾರ್ಜಂಟ್ ಎಟ್ ಆಮ್ಸ್೯ ಆಗಿ ಜೋನ್ಸನ್ ಸಿ.ಎಂ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ರಾಮ ಕೆ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಹರಿಣಿ ಪುತ್ತೂರಾಯ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪತ್ರಕರ್ತ ಮೌನೇಶ್ ವಿಶ್ವಕರ್ಮ, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಮಾಧವ ಗೌಡ, ಯೂತ್ ಸರ್ವಿಸ್ ನಿರ್ದೇಶಕರಾಗಿ ಕೆ.ಎಂ ಸಿಯಾಕ್, ಮೆಂಬರ್ ಶಿಪ್ ಚೇರ್ ಮ್ಯಾನ್ ಆಗಿ ಸುಧೀರ್ ಬಿ, ಟಿಆರ್.ಎಫ್ ಚೇರ್ ಮ್ಯಾನ್ ಆಗಿ ಸಿಲ್ವೆಸ್ತರ್ ಡಿ’ಸೋಜ, ಪಬ್ಲಿಕ್ ಇಮೇಜ್ ಚೇರ್ ಮ್ಯಾನ್ ಆಗಿ ಈಶ್ವರ್ ಬೆಡೇಕರ್, ಟೀಚ್ ಚೇರ್ ಮ್ಯಾನ್ ಆಗಿ ಗೋಪಾಲಕೃಷ್ಣ ಎಂ, ವಿನ್ಸ್ ಚೇರ್ ಮ್ಯಾನ್ ಆಗಿ ಪದ್ಮಾವತಿ, ಪಲ್ಸ್ ಪೋಲಿಯೋ ಚೇರ್ ಮ್ಯಾನ್ ಆಗಿ ಡಾ.ಸಚಿನ್ ಶಂಕರ್, ಜಿಲ್ಲಾ ಪ್ರಾಜೆಕ್ಟ್ ಚೇರ್ ಮ್ಯಾನ್ ಆಗಿ ಮೊಹಮದ್ ಶಾಕೀರ್, ಕ್ಲಬ್ ಟ್ರೈನರ್ ಚೇರ್ ಮ್ಯಾನ್ ರಂಜಿತ್ ಮಥಾಯಿಸ್, ಐಟಿ ಹಾಗೂ ವೆಬ್ ಸೈಟ್ ಚೇರ್ ಮ್ಯಾನ್ ಆಗಿ ಮನ್ಸೂರ್ ಬಿ, ಸಿ.ಎಲ್.ಸಿ.ಸಿ ಚೇರ್ ಮ್ಯಾನ್ ಆಗಿ ನವೀನ್ ಹನ್ಸ್, ಕಲ್ಚರಲ್ ಇವೆಂಟ್ಸ್ ಚೇರ್ ಮ್ಯಾನ್ ಆಗಿ ಬಾಲು ನಾಯ್ಕ್, ಕ್ರೀಡಾ ಚೇರ್ ಮ್ಯಾನ್ ಆಗಿ ಸುಶಾಂತ್ ಹಾರ್ವಿನ್, ಫೆಲೋಶಿಪ್ ಚೇರ್ ಮ್ಯಾನ್ ಆಗಿ ಜೋಯೆಲ್ ಕುಟಿನ್ಹಾರವರು ಅಧಿಕಾರ ಸ್ವೀಕರಿಸಲಿರುವರು.
ನೂತನ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಬ್ದುಲ್ ರಝಾಕ್ ಕಬಕಕಾರ್ಸ್ ರವರು ಮೂಲತಃ ಕಬಕ ನಿವಾಸಿಯಾಗಿದ್ದು ವೃತ್ತಿಯಲ್ಲಿ ಗುತ್ತಿಗೆದಾರರಾಗಿ ಸಮಾಜಸೇವೆಯಲ್ಲೂ ಸಕ್ರೀಯರಾಗಿದ್ದಾರೆ. ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ, ರೋಟರ್ಯಾಕ್ಟ್ ಝೆಡ್.ಆರ್.ಆರ್ ಹಾಗೂ ಡಿ.ಆರ್.ಆರ್ ಆಗಿಯೂ ಅನುಭವ ಹೊಂದಿರುವ ಸಂಘಟನಾ ಚತುರ ಅಬ್ದುಲ್ ರಝಾಕ್ ಅವರು,ರೋಟ ಏಷ್ಯಾದ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಇವರು ರೋಟರಿ ಪುತ್ತೂರು ಎಲೈಟ್ ನ ಸ್ಥಾಪಕ ಸದಸ್ಯರೂ ಆಗಿರುತ್ತಾರೆ.
ನೂತನ ಕಾರ್ಯದರ್ಶಿ ಆಸ್ಕರ್ ಆನಂದ್ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಆಸ್ಕರ್ ಆನಂದ್ ರವರು ಸಮಾಜ ಸೇವೆಯಲ್ಲಿ ಸಕ್ರೀಯರಾಗಿದ್ದು ಪುತ್ತೂರಿನಲ್ಲಿ ಮೆಗಾ ಪ್ಲಾಸ್ಟಿಕ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿರುವುದರ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 25 ವರ್ಷಗಳಿಂದ ರೋಟರಿ ಬಾಂಧವ್ಯ ಹೊಂದಿರುವ ಇವರು, ರೋಟರಿ ಪುತ್ತೂರು ಎಲೈಟ್ ನ ಸ್ಥಾಪಕ ಸದಸ್ಯರಾಗಿರುತ್ತಾರೆ.
ನೂತನ ಕೋಶಾಧಿಕಾರಿ ಸಿಲ್ವಿಯಾ ಡಿ’ಸೋಜ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾಗಿರುವ ಸಿಲ್ವಿಯಾ ಡಿ’ಸೋಜರವರು ವೃತ್ತಿಯಲ್ಲಿ ನೋಟರಿ ವಕೀಲೆಯಾಗಿದ್ದು ಮಹಿಳಾ ವಿಚಾರಧಾರೆ ಹಾಗೂ ಕಾನೂನು ಕುರಿತಾಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ. ಹಲವು ವರ್ಷಗಳ ರೋಟರಿ ಒಡನಾಟ ಹೊಂದಿರುವ ಇವರು ರೋಟರಿ ಪುತ್ತೂರು ಎಲೈಟ್ ನ ಸ್ಥಾಪಕ ಸದಸ್ಯರಾಗಿದ್ದಾರೆ.
ಜೂ.30 ರಂದು ಪದ ಪ್ರದಾನ..
ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜೂ.30 ರಂದು ವಿವೇಕಾನಂದ ಕಾಲೇಜು ರಸ್ತೆಯ ಅಜೇಯ ನಗರದ ಓಝೋನ್ ಹೌಸ್ ನಲ್ಲಿ ಜರಗಲಿದೆ. ಪದ ಪ್ರದಾನ ಅಧಿಕಾರಿಯಾಗಿ ಪಿಡಿಜಿ ಕೃಷ್ಣ ಶೆಟ್ಟಿಯವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದು, ವಲಯ ಐದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ವಲಯ ಸೇನಾನಿ ಸುಜಿತ್ ಪಿ.ಕೆ. ಮುಖ್ಯ ಅತಿಥಿಯಾಗಿ ಭಾಗಹಿಸಲಿದ್ದಾರೆ ರೋಟರಿ ಕ್ಲಬ್ ಪುತ್ತೂರು ಎಲೈಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2022-23ರಲ್ಲಿ ಪ್ಲಾಟಿನಂ ಪ್ಲಸ್ ಗೌರವ..
2020-21 ರಲ್ಲಿ ವಿಜಯ ಹಾರ್ವಿನ್ ಅವರು ಸ್ಥಾಪಕಾಧ್ಯಕ್ಷರಾಗಿ ಆರಂಭಗೊಂಡ ರೋಟರಿ ಪುತ್ತೂರು ಎಲೈಟ್ ಗೆ 2021-22 ನೇ ಸಾಲಿಗೆ ಮನ್ಸೂರ್ ಬಿ. ಅಧ್ಯಕ್ಷರಾಗಿ ಕ್ಲಬ್ ಮುನ್ನಡೆಸಿದ್ದಾರೆ. 2023-24 ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ಕಾರ್ಯದರ್ಶಿಯಾಗಿ ಸಿಲ್ವಿಯಾ ಡಿ’ಸೋಜರವರು ಕ್ಲಬ್ ಅನ್ನು ಮುನ್ನಡೆಸಿದ್ದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ 6 ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ ಗ್ಲೋಬಲ್ ಗ್ರ್ಯಾಂಟ್ ಯೋಜನೆ, ಮತದಾರರ ಜಾಗೃತಿಗೆ ಕವಿಗೋಷ್ಠಿ, 7 ಸ್ಥಳಗಳಲ್ಲಿ ಬೀದಿ ನಾಟಕ ಸಹಿತ ನೂರಕ್ಕೂ ಅಧಿಕ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ರೋಟರಿ ಜಿಲ್ಲೆ 3181ರ ಅತ್ಯುನ್ನತ ಗೌರವವಾದ ಪ್ಲಾಟಿನಂ ಪ್ಲಸ್ ಪುರಸ್ಕಾರವನ್ನು ಪಡೆದಿದೆ.