ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲಾ ಸಂತ್ತಿಗೆ ಇತ್ತೀಚೆಗೆ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಅತ್ಯಧಿಕ ಬಹುಮತಗಳಿಸಿದ ಆಶಿತ್ ಜೆ.ಆರ್.ಶಾಲಾ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದರು. ಉಪನಾಯಕಿಯಾಗಿ ಶ್ರೀಯಾ ಜೊ ಜೊ ಆಯ್ಕೆಯಾದರು. ವಿದ್ಯಾಮಂತ್ರಿ ಮತ್ತು ಆಹಾರ ಮಂಥ್ರಿಯಾಗಿ ಪಿ.ಡಿ.ಜೀವಿತಾ, ಸಾಂಸ್ಕೃತಿಕ ಹಾಗೂ ನೀರಾವರಿ ಮಂತ್ರಿಯಾಗಿ ಆಶ್ವಿತ್ ಜೆ.ಆರ್., ಕ್ರೀಡೆ ಹಾಗೂ ತೋಟಗಾರಿಕಾ ಮಂತ್ರಿಯಾಗಿ ಪವನ್ಕುಮಾರ್, ಸಮಯಪಾಲನೆ ಮತ್ತು ಸ್ವಚ್ಛತಾ ಮಂತ್ರಿಯಾಗಿ ಶೈಲೇಶ್ ಪಿ.ಆರ್., ಸಂಸದೀಯ ಮತ್ತು ಶಿಸ್ತು ಪಾಲನಾ ಮಂತ್ರಿಯಾಗಿ ಜುಬಿನಾ ಜೋಬಿ, ಸಂಪರ್ಕ ಮತ್ತು ರಕ್ಷಣಾ ಮಂತ್ರಿಯಾಗಿ ತ್ರಿಶಾ, ವಾರ್ತಾಪ್ರಸಾರ ಮತ್ತು ಆರೋಗ್ಯ ಮಂತ್ರಿಯಾಗಿ ಶ್ರುತಿ ಟಿ.ಹೆಚ್., ವಿರೋಧ ಪಕ್ಷದ ನಾಯಕನಾಗಿ ಭವಿಶ್ರನ್ನು ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯಗುರು ಪದ್ಮನಾಭ ಪಿ.,ರವರು ಮಾರ್ಗದರ್ಶನ ನೀಡಿದರು. ಸಹಶಿಕ್ಷಕ ಪುರಂದರ ಗೌಡ ಡಿ.ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸಹಶಿಕ್ಷಕಿ ಜಾಹ್ನವಿ ಐ., ಗೌರವ ಶಿಕ್ಷಕಿ ಸುಕನ್ಯಾ ಕೆ.ಯು., ಚಿತ್ರಾ ಪಿ.,ಸಹಕರಿಸಿದರು.