ಪುತ್ತೂರು: ಪುತ್ತೂರು ನಗರಸಭೆ ನೌಕರರ ಉಚಿತ ಬಾಯಿ ಮತ್ತು ದೈಹಿಕ ಆರೋಗ್ಯ, ತಪಾಸಣಾ ಶಿಬಿರ ಹಾಗು ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವು ಜೂ.30ರಂದು ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ.ಜಿಲ್ಲೆ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಬಾಯಿಯ ಆರೋಗ್ಯ ಕಾರ್ಯಕ್ರಮ, ನಗರಸಭೆ ಪುತ್ತೂರು, ಸರಕಾರಿ ಸಾರ್ವಜನಿಕ ಆಸ್ಪತ್ರೆ ಇದರ ವತಿಯಿಂದ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಮಹಾವಿದ್ಯಾಲಯ ದೇರಳಕಟ್ಟೆ ಮತ್ತು ಇನ್ನರ್ವೀಲ್ ಕ್ಲಬ್, ರೋಟರಿ ಎಲೈಟ್ ಪುತ್ತೂರು ಇವರ ಆಶ್ರಯದಲ್ಲಿ ನಡೆದ ತಪಾಸಣೆ ಶಿಬಿರವನ್ನು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಪುತ್ತೂರಾಯ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ರೋಟರಿ ಎಲೈಟ್ ಅಧ್ಯಕ್ಷ ಅಬ್ದುಲ್ ರಜಾಕ್, ಎನಪೋಯ ಆಸ್ಪತ್ರೆಯ ಡಾ. ವೈಭವಿ ಶೆಟ್ಟಿ, ಪುತ್ತೂರು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮೀ, ರೋಟರಿ ಎಲೈಟ್ ಮಾರ್ಗದರ್ಶಕ ಆಸ್ಕರ್ ಆನಂದ್, ಸರಕಾರಿ ಆಸ್ಪತ್ರೆಯ ಡಾ. ಜಯದೀಪ್, ಇನ್ನರ್ವೀಲ್ ಕ್ಲಬ್ನ ಕೋಶಾಧಿಕಾರಿ ಸೀಮಾನಾಗರಾಜ್, ಸಂಪಾದಕಿ ಸುಧಾ ಕಾರ್ಯಪ್ಪ, ನಗರಸಭೆ ಸದಸ್ಯೆ ವಿದ್ಯಾಗೌರಿ, ನಗರಸಭೆ ಕಚೇರಿ ಮೆನೇಜರ್ ಪಿಯುಸ್ ಡಿಸೋಜ, ಎ.ಆರ್ ದೇವಾಡಿಗ, ರವೀಂದ್ರ ಉಪಸ್ಥಿತರಿದ್ದರು. ಸರಳ ಸಮಾರಂಭದ ಬಳಿಕ ಆರೋಗ್ಯ ತಪಾಸಣೆ ನಡೆಯಿತು. ಬಳಿಕ ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವೈದ್ಯರು ಪೌರ ಕಾರ್ಮಿಕರೊಂದಿಗೆ ಗುಂಪು ಚರ್ಚೆ ನಡೆಸಿದರು.