ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ, ವಲಯ ನಾಲ್ಕರ 2023-24ರ ಸಾಲಿನ ಅಸಿಸ್ಟೆಂಟ್ ಗವರ್ನರ್ ಆಗಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಮಾಜಿ ಅಧ್ಯಕ್ಷ ಲಾರೆನ್ಸ್ ಗೊನ್ಸಾಲ್ವಿಸ್ ರವರು ಆಯ್ಕೆಯಾಗಿದ್ದಾರೆ.
ಕೃಷಿ ಕುಟುಂಬದ ಹಿನ್ನೆಲೆಯಿರುವ ಬನ್ನೂರು ನಿವಾಸಿ ಬೆಲ್ಟರ್ ಗೊನ್ಸಾಲ್ವಿಸ್ ಮತ್ತು ಶ್ರೀಮತಿ ಲಿಲ್ಲಿ ಗೊನ್ಸಾಲ್ವಿಸ್ ಇವರ ಪುತ್ರನಾಗಿ ಜನಿಸಿದ ಲಾರೆನ್ಸ್ ಗೊನ್ಸಾಲ್ವಿಸ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಐದನೇ ತರಗತಿವರೆಗೆ ಬನ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಆರರಿಂದ ಏಳನೇ ತರಗತಿಯವರೆಗೆ ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಿಕ್ಷಣವು ಸಂತ ಫಿಲೋಮಿನಾ ಪ್ರೌಢಶಾಲೆ, ಬಿಎ ಪದವಿಯನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಡೆದಿರುತ್ತಾರೆ. ಕಾಲೇಜು ಶಿಕ್ಷಣದ ಬಳಿಕ ಪುತ್ತೂರಿನ ಪ್ರತಿಷ್ಠಿತ ಸೋಜಾ ಬ್ರದರ್ಸ್ ಗ್ರೂಪ್ ಸಂಸ್ಥೆಯಿಂದ ಮಂಗಳೂರಿನಲ್ಲಿ 13 ವರ್ಷ ಮ್ಯಾನೇಜರ್ ಆಗಿ ಸೇವೆ, 1993ರಿಂದ 1999ರ ವರೆಗೆ ದುಬೈಯ ಪ್ರತಿಷ್ಠಿತ ಮಾಡರ್ನ್ ಬೇಕರಿ ಆಂಡ್ ಟ್ರೇಡಿಂಗ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಸೇವೆ, 1999ರಲ್ಲಿ ಸ್ವದೇಶಕ್ಕೆ ಮರಳಿ ಪುತ್ತೂರಿನಲ್ಲಿ ಗೊನ್ಸಾಲ್ವಿಸ್ ಅರ್ಥ್ ಮೂವರ್ಸ್ ಹೆಸರಿನಲ್ಲಿ ಸ್ವಂತ ಉದ್ದಿಮೆ ಪ್ರಾರಂಭಿಸಿದ್ದರು.
ಲಾರೆನ್ಸ್ ಗೊನ್ಸಾಲ್ವಿಸ್ ರವರು ಪುತ್ತೂರಿನ ಡೊನ್ ಬೊಸ್ಕೊ ಕ್ಲಬ್ಬಿನ ಅಜೀವ ಸದಸ್ಯರಾಗಿ, ಬನ್ನೂರು ಸಂತ ಅಂತೋನಿ ಚರ್ಚ್ ನ
ಸೈಂಟ್ ವಿನ್ಸೆಂಟ್ ದೇ ಪಾವ್ಲ್ ಸಭಾದ ಸದಸ್ಯರಾಗಿ ಹಾಗೂ ಪುತ್ತೂರು, ಸುಳ್ಯ ಪ್ರಾದೇಶಿಕ ಮಟ್ಟದ ಅಧ್ಯಕ್ಷರಾಗಿ ಸೇವೆಯನ್ನು ನೀಡಿರುತ್ತಾರೆ. ಅಲ್ಲದೆ 11 ವರ್ಷ ಬನ್ನೂರು ಚರ್ಚ್ ನ ಗುರಿಕಾರರಾಗಿ ಸೇವೆ, ಬನ್ನೂರು ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಮೂರು ವರ್ಷ ಸೇವೆ, ಪುತ್ತೂರು ತಾಲೂಕಿನ ಅರ್ಥ್ ಮೂವರ್ಸ್ ಅಸೋಸಿಯೇಶನ್ ನ ಅಧ್ಯಕ್ಷರಾಗಿ 5 ವರ್ಷ ಸೇವೆ, 2003ರಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಸ್ಥಾಪಕ ಸದಸ್ಯರಾಗಿ ನೇಮಕಗೊಂಡು 2008-09ರಲ್ಲಿ ಅಧ್ಯಕ್ಷರಾಗಿ, 2010-11ರಲ್ಲಿ ರೋಟರಿ ಡಿಸ್ಟ್ರಿಕ್ಟ್ DGNNC ಸದಸ್ಯರಾಗಿ, 2017-18ರಲ್ಲಿ ರೋಟರಿ ವಲಯ ನಾಲ್ಕರ ವಲಯ ಸೇನಾನಿಯಾಗಿ ಸೇವೆ ನೀಡಿರುತ್ತಾರೆ.
ಪ್ರಸ್ತುತ ಲಾರೆನ್ಸ್ ಗೊನ್ಸಾಲ್ವಿಸ್ ರವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಂಗಳೂರಿನ ನಿವಾಸಿ, ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್ ಇವರೊಂದಿಗೆ ಬನ್ನೂರು ಗ್ರಾಮದ “LORGRACE” ಗೊನ್ಸಾಲ್ವಿಸ್ ಕಂಪೌಂಡಿನಲ್ಲಿ ವಾಸವಾಗಿದ್ದಾರೆ.