ಡೇಟಾ ಅನಾಲಿಸ್ಟ್ ಹುದ್ದೆಗೆ ಫಾತಿಮ ರಿಝಾ ಆಯ್ಕೆ

0

ಪುತ್ತೂರು : ಕೋಲಾರದಲ್ಲಿರುವ ಸರಕಾರಿ ಸಾಮ್ಯದ ವಿಸ್ಟ್ರೋನ್ ಇನ್ಫೋಕಾಂ ಮ್ಯಾನ್ಯೂಫ್ಯಾಕ್ಚರಿಂಗ್ ಇಂಡಿಯಾ ಕಂಪೆನಿಯಲ್ಲಿ ಅಜೇಯನಗರ ನಿವಾಸಿ ಅಬ್ದುಲ್ ರಝಾಕ್ ಮತ್ತು ಮಮ್ತಾಜ್ ದಂಪತಿ ಪುತ್ರಿ ಫಾತಿಮಾ ರಿಝಾರವರು “ಡೇಟಾ ಅನಾಲಿಸ್ಟ್” ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಜಲ್ಪಡ್ಪು B.E.M ಶಾಲೆಯಲ್ಲಿ , ಎಂಟನೇ ತರಗತಿಯನ್ನು ಸ.ಪ್ರೌ.ಶಾಲೆ ಕೊಂಬೆಟ್ಟು ಮತ್ತು ಒಂಭತ್ತು ಹಾಗೂ ಹತ್ತನೇ ತರಗತಿಯನ್ನು ಮಂಗಳೂರಿನ ಬಂದರ್ ಪ್ರದೇಶದ ಊರ್ದು ಶಾಲೆಯಲ್ಲಿ ಪೂರ್ಣ ಗೊಳಿಸಿದರು. ಕಾಲೇಜ್‌ ಶಿಕ್ಷಣವನ್ನು ಕದ್ರಿ ಬಳಿಯ ಕೆ.ಪಿ.ಟಿ. ಕಾಲೇಜಿನಲ್ಲಿ Diploma In Computer Science And Engineering ವಿಭಾಗದಲ್ಲಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here