ಪುತ್ತೂರು: ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಪ್ರಯುಕ್ತ ಗಂಗಾತನಯ ಎಂಬ ಯಕ್ಷಗಾನ ತಾಳಮದ್ದಳೆ ಜು. 2 ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಹಳೆನೇರಂಕಿ ಮತ್ತು ಆನಂದ ಸವಣೂರು, ಚೆಂಡೆ ಮದ್ದಳೆಯಲ್ಲಿ ಮೋಹನ ಶರವೂರು ಮತ್ತು ಅಚ್ಯುತ ಪಾಂಗಣ್ಣಾಯ ಸಹಕರಿಸಿದರು.
ಪಾತ್ರವರ್ಗದಲ್ಲಿ ಪ್ರಸಾದ್ ಸವಣೂರು (ಶಂತನು ರಾಜ), ಗುಡ್ಡಪ್ಪ ಗೌಡ ಬಲ್ಯ ( ದೇವವೃತ), ತಾರಾನಾಥ ಸವಣೂರು(ದಾಶರಾಜ ಕಂದರ), ಅಚ್ಯುತ ಪಾಂಗಾಣ್ಣಾಯ (ಯೋಜನಾಗಂಧಿ) ಸಹಕರಿಸಿದರು. ವೀರಮಂಗಲ ದೇವಳದ ವಿಶ್ವಸ್ತ ಮಂಡಳಿಯವರ ಸಹಕಾರದೊಂದಿಗೆ ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಸಂಯೋಜನೆಯಲ್ಲಿ ಶ್ರವಣರಂಗ ಪ್ರತಿಷ್ಠಾನ ಸವಣೂರು ಕಾರ್ಯಕ್ರಮ ಆಯೋಜಿಸಿತು. ಶ್ರೀ ಕೃಷ್ಣ ಕಲಾ ಕೇಂದ್ರ ವೀರಮಂಗಲ ಇದರ ನಿರ್ದೇಶಕ ವಿದ್ವಾನ್ ಗೋಪಾಲಕೃಷ್ಣ ಸಹಕರಿಸಿದರು ನೂರಾರು ಭಕ್ತವೃಂದದವರು ಕಾರ್ಯಕ್ರಮವನ್ನು ವೀಕ್ಷಿಸಿ ಖುಷಿ ಪಟ್ಟರು. ದೇವಳದ ವತಿಯಿಂದ ಸರ್ವರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.