ಉಪ್ಪಿನಂಗಡಿ: ನೇತ್ರ ತಪಾಸಣೆ, ರಕ್ತದಾನ ಶಿಬಿರ

0

ಉಪ್ಪಿನಂಗಡಿ: ಒಡಿಯೂರು ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿಯವರ 62 ನೇ ಹುಟ್ಟು ಹಬ್ಬದ ಪ್ರಯುಕ್ತ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಪ್ಪಿನಂಗಡಿಯಲ್ಲಿ ಜು.2ರಂದು ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು.


ವೈದ್ಯ ಡಾ. ನಿರಂಜನ್ ರೈ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ದಂತ ವೈದ್ಯ ಡಾ. ರಾಜಾರಾಮ ಕೆ.ಬಿ., ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪುತ್ತೂರು ತಾಲೂಕು ಯೋಜನಾ ಮೇಲ್ವಿಚಾರಕಿ ಸವಿತಾ ರೈ, ಸರಕಾರಿ ಮಾದರಿ ಶಾಲಾ ಮುಖ್ಯೋಪಧ್ಯಾಯ ಹನುಮಂತಯ್ಯ , ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಡೀಕಯ್ಯ ಗೌಂಡತ್ತಿಗೆ, ಮತ್ತು ಶಿಬಿರದ ಸಂಪನ್ಮೂಲ ವೈದ್ಯರುಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಜಯರಾಮ ಶೆಟ್ಟಿ, ಹರೀಶ್ ನಾಯಕ್, ಲೋಕೇಶ್ ಬೆತ್ತೋಡಿ, ಅಶೋಕ್ ಕುಮಾರ್ ರೈ ಅರ್ಪಿನಿಗುತ್ತು, ಪ್ರಶಾಂತ್ ಕುಮಾರ್ ರೈ, ಕೆ.ವಿ. ಕುಲಾಲ್, ಕಿಶೋರ್ ಕುಮಾರ್ ಜೋಗಿ, ಜಯಂತಿ, ಭಾರತಿ, ಹರಿಣಾಕ್ಷಿ, ಸುನಂದ, ಸುಮಿತ್ರ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here