ಪುತ್ತೂರು: ಇತ್ತೀಚೆಗೆ ನಡೆದ UGEE ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ CFAL ಸಂಸ್ಥೆಯ ವಿದ್ಯಾರ್ಥಿನಿ ಯಶಸ್ವಿನಿ ಕೆಗೆ ಮೊದಲನೇ ಆಲ್ ಇಂಡಿಯಾ ರ್ಯಾಂಕ್ ಪಡೆದುಕೊಂಡಿದ್ದಾರೆ, ಹಾಗೂ ಸಮಂತ್ ಮಾರ್ಟಿಸ್ ಅವರು ಅಖಿಲ ಭಾರತ 16ನೇ AIR ಪಡೆದುಕೊಂಡಿದ್ದಾರೆ. ಯಶಸ್ವಿನಿ ಕೆ ದಕ್ಷಿಣ ಭಾರತದ ವಿದ್ಯಾರ್ಥಿ ವರ್ಗದಲ್ಲಿ ಪ್ರಥಮ ಬಾರಿಗೆ ಮಹಿಳಾ ವಿದ್ಯಾರ್ಥಿ ಇಂತಹ ಉತ್ಕ್ರಷ್ಟವಾದ ಫಲಿತಾಂಶವನ್ನು ಪಡೆದುಕೊಂಡ ಹೆಗ್ಗಳಿಕೆ ಪಾತ್ರವಾಗಿದ್ದಾರೆ.ಸಮಂತ್ ಮಾರ್ಟಿಸ್ ಅಖಿಲ ಭಾರತ 16ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ.
CFAL ಸಂಸ್ಥೆಯ ಕೇತನ್ ಸುಮನ್, ಅಚಿಂತ್ಯ ಮತ್ತು ಅಂಕಿತ್ ಕಿಣಿ, ಅವರು ಕ್ರಮವಾಗಿ 226, 292, ಮತ್ತು 381 ಅಖಿಲ ಭಾರತ ಶ್ರೇಣಿಗಳನ್ನು ಪಡೆದುಕೊಂಡು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.