ಪುತ್ತೂರು: ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಬಳಿಯಲ್ಲಿರುವ ವಾಹನಗಳ ಫಾರ್ಮ್ ವಾಶ್, ಇಂಟಿರೀಯರ್ ಡಿಟೈಲಿಂಗ್ ನ ಮಳಿಗೆ ಡಿಟೈಲಿಂಗ್ ಕಸ್ಟಮ್ಸ್ ಜು.3ರಂದು ನೂತನ ಆಡಳಿತದೊಂದಿಗೆ ಶುಭಾರಂಭಗೊಂಡಿತು.
ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ಸಮಾಜದಲ್ಲಿ ಯುವ ಜನತೆ ದಾರಿ ತಪ್ಪುತ್ತಿರುವ ಸಮಯದಲ್ಲಿ ಸಣ್ಣ ವಯಸ್ಸಿನ ಯುವಕರು ಸೇರಿಕೊಂಡು ಸ್ವ ಉದ್ಯಮ ಹುಟ್ಟು ಹಾಕುವ ಮೂಲಕ ಸ್ವಾಭಿಮಾನದ ಬದುಕಿಗೆ ಪ್ರಾರಂಭಿಸಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಅಭಿನಂದನೀಯ. ಎಲ್ಲಾ ವಾಹನ ಮ್ಹಾಲಕ ಇದೇ ಸರ್ವೀಸ್ ಸ್ಟೇಷನ್ ಸರ್ವೀಸ್ ಮಾಡಿಸುವ ಮೂಲಕ ನಿತ್ಯ ತುಂಬಿ ತುಲುಕಲಿ. ಸೇವೆಯ ಮೂಲಕ ಸಂಸ್ಥೆಯು ಉತ್ತಮ ಹೆಸರು ಪಡೆಯುವಂತಾಗಲಿ. ಇನ್ನಷ್ಟು ಶಾಖೆಗಳು ಪ್ರಾರಂಭವಾಗಲಿ ಎಂದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಕಹಲೆ ನ್ಯೂಸ್ ನ ಮುಖ್ಯಸ್ಥ ಶ್ಯಾಮ ಸುದರ್ಶನ, ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ಚಂದ್ರಶೇಖರ, ಸೀತಾ ಭಟ್ ಪಾಣಾಜೆ, ಪಾಲುದಾರ ಸರ್ವೇಶ್ ರವರ ತಂದೆ ವೀರರಾಜ್ ಅರಸ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಪಾಲುದಾರ ಸರ್ವೇಶ್ ರವರ ತಾಯಿ ಶಾರದಾ ಅರಸ್ ಸ್ವಾಗತಿಸಿದರು. ಸರ್ವೇಶ್ ವಂದಿಸಿದರು.
ನಮ್ಮಲ್ಲಿ ವಾಹನಗಳ ವೆಲ್ ಫಾರ್ಮ್ ವಾಶ್, ಸೆರಾಮಿಕ್ ಕೋಟಿಂಗ್, ಪೈಂಟ್ ಪ್ರೊಟಕ್ಷನ್ ಫಿಲ್ಕ್, ಇಂಟಿರೀಯರ್ ಡಿಟೈಲಿಂಗ್, ಅಂಡರ್ ಬಾಡಿ ಕೋಟಿಂಗ್, ಸೆಕೆಂಡ್ ಸೇಲ್ಸ್,ಇನ್ಶೂರೆನ್ಸ್, ಗ್ಲಾಸ್ ಕ್ಲೀನಿಂಗ್, ಲೋಗೋ ಕ್ಲೀನಿಂಗ್, ಟೆಪ್ಲಾನ್ ಪಾಲೀಸ್, ಸ್ಕ್ರಾಚ್ ರಿಮೂವಿಂಗ್ ಹಾಗೂ ವಾಕ್ಸ್ ಪಾಲೀಸ್ ಮೊದಲಾದ ಸೇವೆಗಳು ದೊರೆಯಲಿದೆ ಎಂದು ಸಂಸ್ಥೆಯ ಪಾಲುದಾರ ಸರ್ವೇಶ್ ತಿಳಿಸಿದ್ದಾರೆ