ಕೊಯಿಲ ಶಾಲೆಯಲ್ಲಿ ವನಮಹೋತ್ಸವ

0

ಪುತ್ತೂರು: ಸಾಮಾಜಿಕ ಅರಣ್ಯ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಕೊಯಿಲ ಬಡಗನ್ನೂರು ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. 150ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ಅರಣ್ಯ ಇಲಾಖೆಯಿಂದ ಶಾಲೆಗೆ ವಿತರಿಸಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಸಾಮಾಜಿಕ ಅರಣ್ಯದ ಡಿ.ಎಫ್.ಒ ಸುಬ್ಬಯ್ಯ ನಾಯ್ಕ ಭಾಗವಹಿಸಿ ವಿದ್ಯಾರ್ಥಿಗಳು ಪ್ರತಿಯೊಂದು ಗಿಡಗಳ ಜವಾಬ್ದಾರಿ ವಹಿಸಿಕೊಂಡು ಬೆಳವಣಿಗೆ ಗಮನಿಸಬೇಕೆಂದು ತಿಳಿಸಿದರು. ತಾಲೂಕು ಸಾಮಾಜಿಕ ಅರಣ್ಯಾಧಿಕಾರಿ ಶ್ರೀಮತಿ ವಿದ್ಯಾರಾಣಿ,ಬಡಗನ್ನೂರು ಗ್ರಾಮ ಅರಣ್ಯ ವಲಯ ಸಮಿತಿ ಅಧ್ಯಕ್ಷರಾದ ಶ್ರೀಮತಿ ರೇಖಾ ನಾಗರಾಜ್,ಫಾರೆಸ್ಟರ್ ಕೃಷ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಾವತಿ ಎಂ ಬಿ ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳೊಂದಿಗೆ ಅರಣ್ಯ ಇಲಾಖೆಯ ಸರ್ವರನ್ನೂ ವಂದಿಸಿದರು. ಶಿಕ್ಷಕರಾದ ಗಿರೀಶ್ ಅತಿಥಿ ಶಿಕ್ಷಕಿ ಸರಳ ಜ್ಞಾನದೀಪ ಶಿಕ್ಷಕಿ ಪೂರ್ಣಿಮಾ ಸಹಕರಿಸಿದರು.

LEAVE A REPLY

Please enter your comment!
Please enter your name here