ಪುತ್ತೂರು: ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೈತೋಟದ ನಿರ್ಮಾಣದ ಕೆಲಸವನ್ನು ಜು. 3 ರಂದು ಮಾಡಲಾಯಿತು. ಶಾಲಾ ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಜಯಶ್ರೀ, ಉಮ್ಮರ್ ಅಬಾಬಿಲ್, ಸತೀಶ್ ಬಲ್ಯಾಯ, ಉಮ್ಮರ್ ಫಾರುಖ್, ಶೇಖರ್ ಸವಣೂರು, ಶಾಂತರಾಮ ಪೂಜಾರಿ, ಅಶ್ರಫ್ ಜನತಾ, ರೇವತಿ, ಫೌಝೀಯ, ಖತೀಜ, ಜೈನಾಭಿ ಮತ್ತು ಬಿಫಾತೀಮ ಉಪಸ್ಥಿತರಿದ್ದರು.
ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿ ಗಿಡಗಳು, ಬಸಳೆ ಬಳ್ಳಿಯನ್ನು ನೆಡಲಾಯಿತು. ದನ ಕರುಗಳು ಬರದಂತೆ ಬೇಲಿ ಹಾಕಲಾಯಿತು. ಶಾಲೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಚರಂಡಿ ಮಾಡಲಾಯಿತು. ಕಳೆಗಿಡಗಳನ್ನು ಕೀಳಲಾಯಿತು. ಬಹಳ ಜವಾಬ್ದಾರಿಯಿಂದ ಶಾಲೆಯ ಕೆಲಸಗಳನ್ನು ಮಾಡಿದರು. ಅವರೊಟ್ಟಿಗೆ ಶಾಲಾ ಮುಖ್ಯ ಗುರು ನಿಂಗರಾಜು ಕೆ ಪಿ ಕೂಡ ಸೇರಿಕೊಂಡು ಸಹಕರಿಸಿದರು.