ಪುತ್ತೂರು: ವರ್ಷದ ಹಿಂದೆ ಅಪಘಾತದಿಂದಾಗಿ ಕಾಲು ಕಳೆದು ಕೊಂಡ ಬೆಟ್ಟಂಪಾಡಿಯ ಹರಿನಾರಾಯಣ ಅವರ ಪುತ್ರಿ ಭಾಗ್ಯಲಕ್ಷ್ಮೀ ಅವರಿಗೆ ಶ್ರೀರಾಮ ಗೆಳೆಯರ ಬಳಗ ಮತ್ತು ಪುತ್ತಿಲ ಪರಿವಾರದಿಂದ ವೀಲ್ಚಯರ್ ನೀಡಲಾಯಿತು.
ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ಸಂಘಟನೆಯ ಪ್ರಮುಖರು ವೀಲ್ಚಯರ್ ಅನ್ನು ಹರಿನಾರಾಯಣ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕೃಷ್ಣಪ್ರಸಾದ್, ಪ್ರವೀಣ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.