ಪುತ್ತೂರು: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಎಕೌಂಟೆಂಟ್ಸ್ ಆಫ್ ಇಂಡಿಯಾ ಇವರು 2023ರಲ್ಲಿ ನಡೆಸಿದ ಅಂತಿಮ ಚಾರ್ಟರ್ಡ್ ಎಕೌಂಟೆಂಟ್(ಸಿ.ಎ) ಪರೀಕ್ಷೆಯಲ್ಲಿ ಪಾಂಗ್ಲಾಯಿ ಫಾ.ಪತ್ರಾವೋ ಆಸ್ಪತ್ರೆ ಬಳಿಯ ನಿವಾಸಿ ಸ್ವೀಡಲ್ ಲೋಬೊರವರು ಉತ್ತೀರ್ಣಗೊಂಡಿದ್ದಾರೆ.
ಅಂತಿಮ ಸಿಎ ಪರೀಕ್ಷೆಯಲ್ಲಿ ಒಟ್ಟು 449 ಅಂಕಗಳನ್ನು ಪಡೆದ ಸ್ವೀಡಲ್ ಲೋಬೊರವರು ಇನ್ನು ಮುಂದೆ ಸಿಎ ಸ್ವೀಡಲ್ ಲೋಬೊ ಎಂದು ಗುರುತಿಸಿಕೊಳ್ಳಲಿದ್ದಾರೆ. ಇವರು ಮಂಗಳೂರಿನ ಕಂಕನಾಡಿಯಲ್ಲಿರುವ ಸಿಎ ಕೃಷ್ಣಮೂರ್ತಿಯವರಲ್ಲಿ ತರಬೇತಿಯನ್ನು ಪಡೆದುಕೊಂಡಿತ್ತಾರೆ. ಸ್ವೀಡಲ್ ಲೋಬೊರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಫಿಲೋಮಿನಾ ಪದವಿ ಪೂರ್ವ ಹಾಗೂ ಫಿಲೋಮಿನಾ ಕಾಲೇಜಿನಲ್ಲಿ, ಪ್ರೌಢಶಿಕ್ಷಣವನ್ನು ಪಾಂಗ್ಲಾಯಿ ಬೆಥನಿ ಪ್ರೌಢಶಾಲೆಯಲ್ಲಿ ಪಡೆದಿರುತ್ತಾರೆ.
ಫಿಲೋಮಿನಾ ಕಾಲೇಜಿನ ವಿದ್ಯಾಭ್ಯಾಸ ಸಂದರ್ಭ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು ಮಾತ್ರವಲ್ಲ ಉತ್ತಮ ಕ್ರೀಡಾಪಟುವಾಗಿರುವ ಸ್ವೀಡಲ್ ಲೋಬೊರವರು ಸ್ವಿಮ್ಮಿಂಗ್ ನಲ್ಲಿ ರಾಷ್ಟ್ರ ಮಟ್ಟದ ಈಜುಗಾರ್ತಿಯಾಗಿ ಹೆಸರನ್ನು ಗಳಿಸಿದ್ದರು. ಸ್ವೀಡಲ್ ಲೋಬೊರವರು ಪಾಂಗ್ಲಾಯಿ ನಿವಾಸಿ, ಡಿ ನೆಟ್ ಇಂಟರ್ನೆಟ್ ಸರ್ವಿಸ್ ಹಾಗೂ ಕೇಬಲ್ ಆಪರೇಟರ್ ಆಗಿರುವ ದಿಲೀಪ್ ಲೋಬೊ ಹಾಗೂ ವೀಣಾ ಲೋಬೊ ದಂಪತಿ ಪುತ್ರಿಯಾಗಿದ್ದಾರೆ.