ಪುತ್ತೂರು, ಜೂನ್ 4: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಯ ಕಾಂಪೌಂಡ್ ಜರಿದು ರಸ್ತೆ ಮೇಲೆ ಬಿದ್ದ ಘಟನೆ ನಗರದ ಎಪಿಎಂಸಿ ರಸ್ತೆಯ ಸಾಲ್ಮರ ಶಾಲೆ ಸಮೀಪದ ಮನೆಯ ಬಳಿ ನಡೆದಿದೆ. ಮಂಗಳವಾರ ಸಂಜೆ ಸುರಿದ ಮಳೆಗೆ ತ್ಯಾಗರಾಜ ನಗರ ನಿವಾಸಿ ವಿಠಲ ರೈ ಮಾಲಕತ್ವದ ಬಾಡಿಗೆ ಮನೆಯ ಕಾಂಪೌಂಡ್ ಕುಸಿದ ಪರಿಣಾಮ ಕಲ್ಲುಗಳು ರಸ್ತೆ ಹಾಗೂ ಚರಂಡಿ ಮೇಲೆ ಬಿದ್ದು, ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಮಸ್ಯೆ ಎದುರಾಗಿತ್ತು. ಸದ್ಯ ಮಾಲೀಕರಿಂದ ಕಲ್ಲುಗಳ ತೆರವು ನಡೆಸಲಾಗಿದೆ.