ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಸಮರ್ಥರು – ಶ್ರೀಕಾಂತ್ ರಾಥೋಡ್
ಪುತ್ತೂರು : ವಿದ್ಯಾರ್ಥಿಯಾದವನು ಸಮಾಜದ ಮುಂದೆ ಹೇಗಿರಬೇಕೆಂದು ಮೊದಲು ತಿಳಿದುಕೊಳ್ಳಬೇಕು. ಹಾಗೇಯೇ ಐದು ಅತೀ ಪ್ರಮುಖ ವಿಚಾರಗಳನ್ನೂ ಅಂದರೆ , ಕಾಕಚೇಷ್ಟೇ , ಬಕ ಪಕ್ಷಿ ತರಹ ಜ್ಞಾನ , ಶ್ವಾನದ ರೀತಿಯ ನಿದ್ದೆ , ಅಲ್ಪ ಆಹಾರ ಅಭ್ಯಾಸ ಹಾಗೂ ಗೃಹ ತ್ಯಾಗ ಅಂದರೆ ಮನೆ ವ್ಯವಹಾರ ದಲ್ಲಿ ಕಡಿಮೆ ಒಗ್ಗೂಡಿಸಿಕೊಳ್ಳುವಿಕೆ ಮೂಲಕ ವಿದ್ಯಾರ್ಥಿಗಳು ಬೆಳೆಯಬೇಕು , ದ.ಕ.ಜಿಲ್ಲೆಯ ವಿದ್ಯಾರ್ಥಿಗಳು ಬಹಳ ಜಾಣ , ನಿಪುಣರಾಗಿದ್ದು ಯಾವುದೇ ಸ್ಪರ್ಧಾತ್ಮಕ ಪರೀಕ್ಷೇಯಲ್ಲೂ ಕೂಡ ನೂರಕ್ಕೇ ,ನೂರು ಜಯ ಪಡೆಯುವಲ್ಲೂ ಸಮರ್ಥರೆಂದು ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಶ್ರೀಕಾಂತ್ ರಾಥೋಡ್ ಹೇಳಿದರು.
ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಸಭಾಭವನ ಇಲ್ಲಿ ಜು.8 ರಂದು ನಡೆದ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ , ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಪದವಿ ವಿದ್ಯಾರ್ಥಿಗಳು ಉದ್ಯೋಗ ಲಭಿಸುವ ತನಕ ಒಂದೂವರೆ ವರ್ಷಗಳ ಕಾಲ ತಿಂಗಳಿಗೆ ಸ್ಡೈಫಂಡ್ ನೀಡುವ ಕೆಲಸ ಸರಕಾರ ಮಾಡಲಿದೆ ಎಂದರು.
ಸಮಾರಂಭ ಉದ್ಘಾಟನೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ,ಹಾಸ್ಯ ಕಲಾವಿದ ರವಿ ರಾಮಕುಂಜ ದೀಪ ಪ್ರಜ್ವಲನೆ ಮೂಲಕ ನೆರವೇರಿಸಿ , ಶುಭಕೋರಿದರು. ಪ್ರಾಂಶುಪಾಲ ಫ್ರೋ.ಅಪ್ಪು ಕಾಲೇಜಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಾಪಕಿ ನಮಿತಾ ಪೈ , ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಬಾಲಚಂದ್ರ ಶೆಟ್ಟಿಗಾರ್ , ಕಾಲೇಜು ನಾಯಕ ವಿನೀತ್ ಬಪ್ಪಳಿಗೆ , ಕ್ರೀಡಾ ಘಟಕದಧ್ಯಾಕ್ಷ ನರೇಂದ್ರ ,ಎನ್ಎಸ್ಎಸ್ ಘಟಕದಧ್ಯಾಕ್ಷ ಚರಣ್ , ಕಾರ್ಯದರ್ಶಿ ವಿಖ್ಯಾತ್ , ಕ್ರೀಡಾ ಕಾರ್ಯದರ್ಶಿ ಶಶಾಂಕ್ ಹಾಗೂ ಎನ್ಎಸ್ಎಸ್ ನಾಯಕಿ ನಿತ್ಯ ಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಭೋಧಕ ವೃಂದ ಹಾಗೂ ಸಿಬಂದಿ ವರ್ಗ , ಆಡಳಿತ ಮಂಡಳಿ , ಶಿಕ್ಷಕ ರಕ್ಷಕ ಸಂಘದ ಸದಸ್ಯರು , ಹೆತ್ತವರು , ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಆ ಬಳಿಕ ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.