ಸವಣೂರು ಚಾಪಲ್ಲ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡ ಯೋಜನೆಗಳ ಮಾಹಿತಿ ಫಲಕ ಅನಾವರಣ-ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ಪುತ್ತೂರು: ಬದ್ರಿಯಾ ಜುಮ್ಮಾ ಮಸ್ಜಿದ್ ಚಾಪಲ್ಲ, ಸವಣೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಅದರ ಅಂಗವಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳ ಸಮಗ್ರ ಮಾಹಿತಿಗಳನ್ನು ಒಳಗೊಂಡ ಫಲಕದ ಅನಾವರಣ ಹಾಗೂ ಪ್ರಸಕ್ತ ಸಾಲಿನ ಸದಸ್ಯತ್ವ ಅಭಿಯಾನಕ್ಕೆ ಜು.7ರಂದು ಚಾಪಲ್ಲ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಚಾಲನೆ ನೀಡಲಾಯಿತು.

ಅಧ್ಯಕ್ಷತೆಯನ್ನು ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಇದರ ಅಧ್ಯಕ್ಷ ಝಕರಿಯಾ ಮಾಂತೂರು ವಹಿಸಿದ್ದರು. ದುವಾ ನೆರವೇರಿಸಿ ಉದ್ಘಾಟಿಸಿದ ಚಾಪಲ್ಲ ಮುದರ್ರಿಸ್ ಮುಹಮ್ಮದ್ ಅಶ್ರಫ್ ಪಾಝಿಲ್ ಬಾಖವಿ ಅಲ್ ನೂರ್ ಬೆಳೆದು ಬಂದ ಹಾದಿಯ ಕುರಿತು ಮಾತನಾಡಿ, ಶುಭ ಹಾರೈಸಿದರು. ಮಾಹಿತಿ ಫಲಕದ ಅನಾವರಣವನ್ನು ಜಮಾಅತ್ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ ನೆರವೇರಿಸಿದರು. ಜಮಾಅತ್ ಮಾಜಿ ಅಧ್ಯಕ್ಷ ಮಹಮ್ಮದ್ ಹಾಜಿ ಕಣಿಮಜಲು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಾಪಲ್ಲ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ರಿಯಾದ್ ಇದರ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಸಹಲ್, ಜಮಾಅತ್ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜೂರುಕಾರ್ಸ್, ಚಾಪಲ್ಲ ಮುಸ್ಲಿಂ ಹೆಲ್ಪ್ ಲೈನ್ ಅಸೋಶಿಯೇಷನ್ ಯುಎಇ ಇದರ ಕೋಶಾಧಿಕಾರಿ ಹನೀಫ್ ಪಟ್ಟೆ, ಜಮಾಅತ್ ಸಮಿತಿ ಕೋಶಾಧಿಕಾರಿ ರಫೀಕ್ ಹಾಜಿ ಅರ್ತಿಕೆರೆ, ಅಲ್ ನೂರ್ ಮಾಜಿ ಅಧ್ಯಕ್ಷ ಉಮರಬ್ಬ ಮುಳಾರ್, ಜಮಾಅತ್ ಸಮಿತಿ ಸದಸ್ಯರಾದ ಖಾಸಿಂ ಹಾಜಿ ಕೇಕುಡೆ, ಬಿ.ಎಂ ಅಹಮ್ಮದ್ ಹಾಜಿ, ಅಬೂಬಕ್ಕರ್ ಹಾಜಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮಾಅತಿನ ಹಲವಾರು ಹಿರಿಯ ಸದಸ್ಯರು, ಜಮಾಅತಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಲ್ ನೂರ್ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಅಲ್ ನೂರ್ ಸಂಘಟನಾ ಕಾರ್ಯದರ್ಶಿ ರಫೀಕ್ ಎಂ ಎ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here