ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

0

ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ಜು.8ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ಅತಿ ಫಾ. ಸ್ಟಾನಿ ಪಿಂಟೊ ಮಾತನಾಡಿ ಮಕ್ಕಳ ಶ್ರೇಯೋಭಿವೃದ್ಧಿಯ ಕುರಿತು ಪೋಷಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.


2022-23 ನೇ ಸಾಲಿನ ಪ್ರಗತಿಯ ಪರಿಚಯವನ್ನು ಶಿಕ್ಷಕಿ ಮೋಲಿ ಫೆರ್ನಾಂಡಿಸ್ ತಿಳಿಸಿದರು. ಶಿಕ್ಷಕಿ ಆಶಾ ರೆಬೆಲ್ಲೊ 2022-23 ನೇ ಸಾಲಿನ ಆಯವ್ಯಯ ಪಟ್ಟಿಯನ್ನು ವಾಚಿಸಿದರು. ಮಾದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂ| ಫಾ| ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಇಂದಿನ ಮಕ್ಕಳು ಆತ್ಮಸ್ಥೈರ್ಯ ಜವಾಬ್ದಾರಿ, ಹಿರಿಯರಲ್ಲಿ ಭಯ ಭಕ್ತಿ ಇಂತಹ ಮಾನವೀಯ ಗುಣಗಳನ್ನು ಬೆಳೆಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ಕರೆ ನೀಡಿದರು.

ಶಾಲೆಯ ಮುಖ್ಯ ಗುರು ವಂ| ಫಾ| ಮ್ಯಾಕ್ಸಿಂ ಡಿ ಸೋಜಾ ಎಂ. ಶಾಲೆಯ ಕಾರ್ಯಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು. 2023-24 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ರಚನೆ ಮಾಡಲಾಯಿತು. ಎಂಟನೆಯ ತರಗತಿಯ ವಿದ್ಯಾರ್ಥಿಗಳಿಂದ ಏಳು ಮಂದಿ ಪೋಷಕರು ನೂತನ ಸಮಿತಿಗೆ ಆಯ್ಕೆಯಾದರು. 2023-24 ನೇ ಸಾಲಿನ ಉಪಾಧ್ಯಕ್ಷರಾಗಿ ಮೌರಿಸ್ ಕುಟಿನ್ಹಾ ಹಾಗೂ ಜತೆ ಕಾರ್ಯದರ್ಶಿಯಾಗಿ ದಿವ್ಯಾ ರೈ ಆಯ್ಕೆಗೊಂಡರು. ಮುಖ್ಯ ಗುರುಗಳು ಸ್ವಾಗತಿಸಿ, ಶಿಕ್ಷಕಿ ಶಿಲ್ಪಾ ವಂದಿಸಿ, ಶಿಕ್ಷಕಿ ಕಾರ್ಮಿನ್ ಪಾಯಸ್ ನಿರೂಪಿಸಿದರು. ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here