ಕೇದಾರನಾಥ ಅವಘಡ: ಕೂದಲೆಳೆ ಅಂತರದಿಂದ ಪಾರಾದ ತಂಡ

0

ಉಪ್ಪಿನಂಗಡಿ: ಕೇದಾರನಾಥನ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಕಣಿವೆಯಲ್ಲಿನ ಗುಡ್ಡದಿಂದ ಬೃಹತ್ ಬಂಡೆಕಲ್ಲು ಜರಿದು ವಾಹನಗಳ ಮೇಲೆ ಬಿದ್ದ ಪರಿಣಾಮ ಐವರು ಯಾತ್ರ್ರಾರ್ಥಿಗಳು ಸಾವನ್ನಪ್ಪಿ ಇತರೇ ಕೆಲ ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದ್ದು, ಈ ವೇಳೆ ಉಪ್ಪಿನಂಗಡಿಯ ಯಾತ್ರಾರ್ಥಿಗಳ ತಂಡ ಕೂದಲೆಳೆ ಅಂತರದಿಂದ ಪಾರಾಗಿದೆ.

ಉಪ್ಪಿನಂಗಡಿಯ ಕೃಷ್ಣ ಶೆಣೈ ನೇತೃತ್ವದ ತೀರ್ಥಯಾತ್ರೆ ತಂಡ ಸೋಮವಾರದಂದು ಕೇದಾರನಾಥನ ದರ್ಶನ ಪಡೆದು ಹಿಂದಿರುಗುವ ವೇಳೆ ಈ ಘಟನೆ ಸಂಭವಿಸಿದೆ ಎಂದು ಕೃಷ್ಣ ಶೆಣೈಯವರು ಪತ್ರಿಕೆಗೆ ತಿಳಿಸಿದ್ದು, ಸೋಮವಾರ ದಿನವಿಡೀ ಶಾಂತವಾಗಿದ್ದ ವಾತಾವರಣ ಮಧ್ಯ ರಾತ್ರಿ ಕಳೆಯುತ್ತಿದ್ದಂತೆಯೇ ಭಾರೀ ಮಳೆ ಸುರಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ದಾರಿಯುದ್ದಕ್ಕೂ ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು ಸಂಭವಿಸಿದ್ದು, ಕೇದಾರನಾಥದಿಂದ 40 ಕಿ.ಮೀ. ದೂರದಲ್ಲಿನ ಹೆಲಿಪ್ಯಾಡ್ ಹೊಂದಿರುವ ಸ್ಥಳದ ಬಳಿ ಈ ದುರ್ಘಟನೆ ಸಂಭವಿಸಿದೆ. ತಮ್ಮ ಕಣ್ಣ ಮುಂದೆಯೇ ಈ ದುರ್ಘಟನೆ ಸಂಭವಿಸಿದ್ದು, ದೇವರ ದಯೆಯಿಂದ ನಮ್ಮ ತಂಡ ಸುರಕ್ಷಿತವಾಗಿದೆ ಎಂದು ಅವರು ದೂರವಾಣಿ ಮೂಲಕ ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here