ನೆಲ್ಯಾಡಿ ಸಾಪಿನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜಿನ ಸ್ಟಾರ್ ಆಫ್ ಈಯರ್ ಆಗಿ ರಿಜೋ ಜೋಸೆಫ್

0

ನೆಲ್ಯಾಡಿ: ಇಲ್ಲಿನ ಸಾಪಿನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜಿನ 2022-23ನೇ ಸಾಲಿನ ಸ್ಟಾರ್ ಆಫ್ ದೀ ಈಯರ್ ಆಗಿ ಕೊಪ್ಪ ಕೆರ್ನಡ್ಕ ನಿವಾಸಿ ಹಾಗೂ ಕಾಲೇಜಿನ ಮೂರನೇ ವರ್ಷದ ಬಿ.ಕಾಂ ವಿದ್ಯಾರ್ಥಿ ರಿಜೋ ಜೋಸೆಫ್ ಅವರು ಆಯ್ಕೆಯಾಗಿದ್ದಾರೆ.

2022-23ನೇ ಸಾಲಿನಲ್ಲಿ ಕಲಿಕೆ, ಕಲೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ರಿಜೋ ಜೊಸೇಫ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ರೆ.ಫಾ ತೋಮಸ್ ಬಿಜಿಲಿ ಅವರು ಪ್ರಶಸ್ತಿಯನ್ನು ನೀಡಿದರು. ರಿಜೋ ಜೊಸೇಫ್ ಅವರು ಕೊಪ್ಪ ಕೆರ್ನಡ್ಕ ನಿವಾಸಿ ಜೋಶಿ ಮತ್ತು ರೀನಾ ದಂಪತಿಯ ಪುತ್ರ ಮತ್ತು ರಿಯಾ ಜೊಸೇಫ್ ಅವರ ಸಹೋದರರಾಗಿದ್ದಾರೆ.

LEAVE A REPLY

Please enter your comment!
Please enter your name here