ಒಡಿಯೂರು ಸ್ವಾಮೀಜಿಯವರ ಹುಟ್ಟುಹಬ್ಬ ಮತ್ತು ಗ್ರಾಮೋತ್ಸವ-ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ

0

ಪುತ್ತೂರು: ಪೂಜ್ಯ ಒಡಿಯೂರು ಸ್ವಾಮೀಜಿಯವರ ಹುಟ್ಟುಹಬ್ಬ ಮತ್ತು ಗ್ರಾಮೋತ್ಸವದ ಪ್ರಯುಕ್ತ ಗುರುದೇವ ಸೇವಾ ಬಳಗ ಪುತ್ತೂರು ಹಾಗೂ ವಜ್ರಮಾತ ಮಹಿಳಾ ಘಟಕ ಪುತ್ತೂರು ವತಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದೊಂದಿಗೆ ಮೋನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಐತಪ್ಪ ನಾಯ್ಕ್ ರವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ವಜ್ರಮಾತ ಅಧ್ಯಕ್ಷ ನಯನ ರೈ, ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಸದಸ್ಯರಾದ ವತ್ಸಲ ನಾಯಕ್, ಸುಮಂಗಲ ಶೆಣೈ, ವೇದಾವತಿ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here