ಹಿರಿಯ ನ್ಯಾಯವಾದಿ ಚಂದ್ರಶೇಖರ್ ಗೌಡ ಮುಂಗ್ಲಿಮನೆರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ಅಗಲಿದ ಹಿರಿಯ ನ್ಯಾಯವಾದಿ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಮತ್ತು ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐನ ಮಾಜಿ ಮಾಜಿ ನಿರ್ದೇಶಕ ಚಂದ್ರಶೇಖರ್ ಗೌಡ ಮುಂಗ್ಲಿಮನೆರವರ ಶ್ರದ್ಧಾಂಜಲಿ ಸಭೆಯು ಜು.15 ರಂದು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಮಧ್ಯಾಹ್ನ ಜರಗಿತು.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ


ನ್ಯಾಯವಾದಿ ಎನ್.ಕೆ ಜಗನ್ನೀವಾಸ್ ರಾವ್ ರವರು ಮಾತನಾಡಿ, ಚಂದ್ರಶೇಖರ ಗೌಡರವರು ಕೇವಲ ವಕೀಲರಾಗಿ ಮಾತ್ರ ಸೇವೆ ಸಲ್ಲಿಸಿಲ್ಲ, ಸಮಾಜಸೇವೆಯಲ್ಲೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಚಂದ್ರಶೇಖರ ಗೌಡರವರಿಗೆ ದೇವರು ಒಳ್ಳೆಯ ಮರಣವನ್ನು ಕರುಣಿಸಿರುತ್ತಾರೆ. ಯಾರಿಗೂ ಕಷ್ಟ ಕೊಡದೆ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ.


ನ್ಯಾಯವಾದಿ ಒಕ್ಕಲಿಗ ಸಮುದಾಯಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಚಿದಾನಂದ ಬೈಲಾಡಿರವರು ಮಾತನಾಡಿ, ಅಗಲಿದ ಚಂದ್ರಶೇಖರ ಗೌಡರವರು ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು ಮಾತ್ರವಲ್ಲ ಗೌಡ ಸಮುದಾಯದ ಏಳಿಗೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಹುಟ್ಟು ಆಕಸ್ಮಿಕ ಹಾಗೂ ಸಾವು ನಿಶ್ಚಿತ. ಆದರೆ ಹುಟ್ಟು, ಸಾವಿನ ಮಧ್ಯೆ ಮಾನವ ಹೇಗೆ ಜೀವಿಸಿದ್ದಾನೆ ಎಂಬುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಳೆದ ಎಂಟು ದಶಕಗಳಿಂದ ಚಂದ್ರಶೇಖರ ಗೌಡರವರು ನಿಜಕ್ಕೂ ಸಾರ್ಥಕ ಜೀವನವನ್ನು ನಡೆಸಿರುತ್ತಾರೆ ಎಂದು ಹೇಳಿ ಚಂದ್ರಶೇಖರ ಗೌಡರವರ ಅಗಲಿಕೆಯ ನೋವನ್ನು ಭರಿಸಲು ಭಗವಂತನು ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಅಗಲಿದ ಚಂದ್ರಶೇಖರ ಗೌಡರವರ ಪತ್ನಿ ವಸಂತಿ, ಪುತ್ರಿಯರಾದ ಜ್ಯೋತಿ ಮತ್ತು ಸೌಮ್ಯ, ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದರು.

ಅಜ್ಜನನ್ನು ನೆನೆಸಿದ ಮೊಮ್ಮಗಳು..
ನಮ್ಮ ಪ್ರೀತಿ ಅಜ್ಜ ಯಾವಾಗಲೂ ನಮ್ಮೊಟ್ಟಿಗೆ ಇರುತ್ತಿದ್ದರು. ನಮ್ಮೊಂದಿಗೆ ಆಟ ಆಡುತ್ತಿದ್ದರು. ಅವರಿಗೆ ನಾವಂದ್ರೆ ತುಂಬಾ ಪ್ರೀತಿ ಎಂದು ಅಗಲಿದ ಚಂದ್ರಶೇಖರ ಗೌಡರವರ ಮೊಮ್ಮಗಳು ಸಣ್ಣ ಹರೆಯದ ಬಾಲಕಿ ವಿಭಾರವರು ತನ್ನ ಅಜ್ಜನನ್ನು ಕಳೆದುಕೊಂಡ ದುಃಖದಲ್ಲಿ ಭಾವುಕರಾಗಿ ಹೇಳಿದರು.

ಮೌನ ಪ್ರಾರ್ಥನೆ..ಪುಷ್ಪಾರ್ಚನೆ..
ಅಗಲಿದ ಚಂದ್ರಶೇಖರ ಗೌಡ ಮುಂಗ್ಲಿಮನೆರವರ ಆತ್ಮಕ್ಕೆ ಚಿರಶಾಂತಿ ಕೋರಲೆಂದು ಹಾಜರಿದ್ದ ಸಭಿಕರು ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಚಂದ್ರಶೇಖರ ಗೌಡರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here