ಕೆವಿಜಿ ಐಪಿಎಸ್ ನಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಿಂದ ‘ಅಬಾಕಸ್ ‘ ಗಣಿತ ತರಗತಿ ಉದ್ಘಾಟನೆ

0

ಪುತ್ತೂರು: ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜು.15 ರಂದು ‘ಅಬಾಕಸ್ ‘ ಗಣಿತ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಶಾಲಾ ಆಡಿಟೋರಿಯಮ್ ನಲ್ಲಿ ನಡೆಯಿತು.


ದೀಪವನ್ನು ಬೆಳಗಿಸುವುದರ ಮೂಲಕ ‘ಅಬಾಕಸ್ ‘ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ಅಬಾಕಸ್ ‘ ತರಗತಿಯನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳು ಗಣಿತದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ ಜೊತೆಗೆ ಅವರ ಬೌದ್ಧಿಕ ಸಾಮರ್ಥ್ಯ ವೃದ್ಧಿಗೊಳ್ಳುತ್ತದೆ ಎಂದು ತಿಳಿಸಿದರು.


‘ಅಬಾಕಸ್ ‘ ತರಗತಿಯ ಬಗ್ಗೆ ತರಬೇತಿ ನೀಡಲು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಪುತ್ತೂರು ಮತ್ತು ಸುಳ್ಯ ಇದರ ಸಿಇಒ ಆಗಿರುವ ಶ್ರೀಮತಿ ಪ್ರಫುಲ್ಲ ಗಣೇಶ್ ರವರು ಅಬಾಕಸ್ ತರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ.ರೇಣುಕಾ ಪ್ರಸಾದ್ ಕೆ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ಉಪ ಪ್ರಾ ಪಶು ಶಿಲ್ಪ ಬಿದ್ದಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಗಣೇಶ್ ಕೈಂದಾಡಿ, ತರಬೇತುದಾರರಾದ ಕು.ನಿಕ್ಷಿತಾ ಮತ್ತು ಕು.ಹರ್ಷಿತಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here