ನಿಡ್ಪಳ್ಳಿ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ ಇಲ್ಲಿಗೆ MENDA ಫೌಂಡೇಶನ್ ಎಸ್ & ಪಿ ಗ್ಲೋಬಲ್ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಸ್ಮಾರ್ಟ್ ಕ್ಲಾಸನ್ನು ಜು.10 ರಂದು ಹಸ್ತಾಂತರಿಸಲಾಯಿತು.
ಶಾಲೆಯ ಹಳೆ ವಿದ್ಯಾರ್ಥಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ಲೋಕನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಸೆಲ್ಕೊ ಸೋಲಾರ್ ಸಂಸ್ಥೆಯ ಮಾನೇಜರ್ ಪ್ರಸಾದ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಮಾರ್ಟ್ ಕ್ಲಾಸ್ ನ ಉಪಯೋಗ ಮತ್ತು ಸೆಲ್ಕೊ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮೆನೇಜರ್ ಸಂಜಿತ್ ರೈ, ಬ್ರಾಂಚ್ ಮೆನೇಜರ್ ಸುಧಾಕರ ಆಳ್ವ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ ಗುಮ್ಮಟೆಗದ್ದೆ, ಶಾಲಾ ಮುಖ್ಯಗುರು ಲಿಂಗಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಮುಖ್ಯಗುರು ಲಿಂಗಮ್ಮ ಸ್ವಾಗತಿಸಿದರು ದೈಹಿಕ ಶಿಕ್ಷಣ ಶಿಕ್ಷಕಿ ವಾಣಿಶ್ರೀ ವಂದಿಸಿದರು. ಸಹಶಿಕ್ಷಕರಾದ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಪುಷ್ಪಾವತಿ, ನಾಗರತ್ನ, ಗೀತಾ, ಅತಿಥಿ ಶಿಕ್ಷಕಿ ಚೇತನಾ ಸತೀಶ್, ಗೌರವ ಶಿಕ್ಷಕಿಯರಾದ ಪ್ರತಿಮಾ ಹಾಗೂ ರೇಷ್ಮಾ ಸಹಕರಿಸಿದರು.