ಸವಣೂರು: ಪಾಲ್ತಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಜು.15ರಂದು ಶಾಲಾ ಮಕ್ಕಳ ಸುರಕ್ಷತೆ ಮಾಹಿತಿ ಕಾರ್ಯಗಾರ ನಡೆಯಿತು. ಬೆಳ್ಳಾರೆ ಆರಕ್ಷಕ ಠಾಣೆಯ ಪಾಲ್ತಾಡಿ ಮತ್ತು ಪೆರುವಾಜೆ ಬೀಟ್ ಪೋಲಿಸ್ ಅಧಿಕಾರಿ ಪೂಜಾ ನಾಯಕ್ ಹಾಗೂ ಹೆಡ್ ಕಾನ್ಸ್ಟೇಬಲ್ ಸತೀಶ.ಬಿ ಅವರು, ಫೋಕ್ಸೋ ಕಾಯಿದೆ, ಮಕ್ಕಳ ಹಕ್ಕುಗಳು, ಬಾಲ ಅಪರಾಧ, ವಿಧಿಸುವ ಶಿಕ್ಷೆಗಳು, ಸಂಚಾರಿ ಸುರಕ್ಷತಾ ನಿಯಮಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲ್ತಾಡಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ ವಹಿಸಿದ್ದರು. ಸವಣೂರು ಗ್ರಾ.ಪಂ ಸದಸ್ಯ ತಾರಾನಾಥ ಬೊಳಿಯಾಲ,ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸತ್ಯವತಿ ,ಲೋಹಿತ್ ಬಂಗೇರ ಬಾಳಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದ ಬಳಿಕ ದಿ.ಕಮಲಾ ಶೀನಪ್ಪ ಪೂಜಾರಿ ಬೊಳಿಯಾಲ ಅವರ ಪುಣ್ಯಸ್ಮರಣೆಯ ಅಂಗವಾಗಿ ಪುಷ್ಪಾವತಿ ಬಾಳಪ್ಪ ಸುವರ್ಣ ಬಾಳಾಯ ಅವರು ಅನ್ನಸಂತರ್ಪಣೆ ನೀಡಿದರು.
ಕಾರ್ಯಾಗಾರದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು ಶಾಲಾ ಮಕ್ಕಳ ಪೋಷಕರು ಭಾಗವಹಿಸಿದ್ದರು. ಶಾಲಾ ಮುಖ್ಯಗುರು ಸುಜಾತಾ ರೈ ಪಿ ಜಿ ಸ್ವಾಗತಿಸಿ, ವಂದಿಸಿದರು. ಸಹ ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.