ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿಆಟಿ ಅಮಾವಾಸ್ಯೆಯ ಕಷಾಯ ವಿತರಣೆ

0

ಪುತ್ತೂರು: ಆಟಿ ಅಮಾವಾಸ್ಯೆಯ ದಿನ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ಹಾಳೆ ಮರದ ತೊಗಟೆಯ ಕಷಾಯ ವಿತರಣೆ ಜು.17ರಂದು ಬೆಳಿಗ್ಗೆ ನಡೆಯಿತು.
ಮಠದ ಪ್ರಧಾನ ಅರ್ಚಕ ವೇ.ಮೂ. ರಾಘವೇಂದ್ರ ಉಡುಪ ಅವರು ಬೆಳಿಗ್ಗೆ ಪೂಜೆಯ ಬಳಿಕ ಭಕ್ತರಿಗೆ ತೀರ್ಥ, ಅಕ್ಷತೆಯ ಬಳಿಕ ಜೌಷಧೀಯ ಗುಣವುಳ್ಳ ತುಳುನಾಡಿನ ಸಂಪ್ರದಾಯದಂತೆ ಹಾಳೆ ಮರದ ತೊಗಟೆಯ ಕಷಾಯವನ್ನು ಭಕ್ತರಿಗೆ ವಿತರಿಸಿದರು. ಮಠದ ಕಾರ್ಯದರ್ಶಿ ಯು.ಪೂವಪ್ಪ ಉಪಸ್ಥಿತರಿದ್ದರು. ಭಕ್ತರು ಸರದಿ ಸಾಲಿನಲ್ಲಿ ಬಂದು ಕಷಾಯವನ್ನು ತಾವು ಸೇವಿಸಿ ಮನೆ ಮಂದಿಗೆಂದು ಬಾಟಲಿ, ಸ್ಟೀಲ್ ಪಾತ್ರೆಗಳಲ್ಲಿ ತುಂಬಿಸಿಕೊಂಡರು.
ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಆಟಿ ಅಮಾವಾಸ್ಯೆ ತುಳು ಸಂಪ್ರದಾಯದ ಅಡಿಯಲ್ಲಿ ಒಟ್ಟು ಸೇರುವ ಹಬ್ಬವಾಗಿದೆ. ಈ ವರ್ಷ ತುಳುವರ ಸಂಪ್ರದಾಯವಾದ ಹಾಳೆ ಮರದ ಕೆತ್ತೆಯ ಕಷಾಯ ಪ್ರತಿಯೊಬ್ಬ ಭಕ್ತನಿಗೂ ಹಂಚುವ ಮಠದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗ ಹರನಾದ ಶಂಕರ ಸರ್ವರ ಸರ್ವ ರೋಗವನ್ನು ಹರಣ ಮಾಡಿ ಲೋಕಕಲ್ಯಾಣ ಮಾಡಲಿ ಅನ್ನುವ ಶ್ರೇಷ್ಠ ಉದ್ದೇಶದಿಂದ ಹಂಚುವ ಈ ಔಷದಿಯ ಸದುಪಯೋಗ ಪಡೆಯಲು ಆಸ್ತಿಕ ಸಮಾಜದ ಭಕ್ತರಲ್ಲಿ ಮಠದ ಮೂಲಕ ವಿನಂತಿಸಲಾಗಿದೆ.

40 ವರ್ಷಗಳಿಂದ ತುಳುನಾಡ ಸಂಪ್ರದಾಯ ಆಚರಣೆ
ಆಟಿ ಅಮಾವಾಸ್ಯೆಯ ದಿನದಂದು ಮಾಡಲಾಗುವ ಹಾಲೆ ಮರದ ಕಷಾಯ ವಿಶೇಷ. ಆಷಾಢ ಮಾಸದಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆ ಮಾನವನ ಮೇಲೂ ಪರಿಣಾಮ ಬೀರುತ್ತದೆ. ನಿರಂತರ ಮಳೆ ಸುರಿಯುವುದರಿಂದ ರೋಗ ರುಜಿನಗಳು ಕೂಡ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಆರೋಗ್ಯವನ್ನು ಉತ್ತಮವಾಗಿರಿಸಲು ಈ ಹಾಳೆ ಮರದ ಕಷಾಯ ಕುಡಿಯುತ್ತಾರೆ. ಇದು ಸರ್ವ ರೋಗ ನಿವಾರಕ ಅನ್ನೋ ನಂಬಿಕೆ ತುಳುವರಲ್ಲಿದೆ. ಮಠದ ಮೂಲಕ ಸುಮಾರು 40 ವರ್ಷಗಳಿಂದ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದೇವೆ.
ಯು.ಪೂವಪ್ಪ,
ಕಾರ್ಯದರ್ಶಿ
ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಕಲ್ಲಾರೆ

LEAVE A REPLY

Please enter your comment!
Please enter your name here