ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ – ವಿವೇಕಾನಂದ ಆ.ಮಾ ಶಾಲೆಯ ಅವಿ.ವಿ.ರೈ ಗೇ ಚಿನ್ನ

0

ಪುತ್ತೂರು : ಉಡುಪಿಯ ರಾಜಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಹೈಫೈವ್ (HIGH FIVE) ಚಾಂಪಿಯನ್‌ಷಿಪ್ 2023 ರಲ್ಲಿ ಬಾಲಕರ ವೈಯಕ್ತಿಕ 45 ಕೆಜಿ ವಿಭಾಗದಲ್ಲಿ ಅವಿ ವಿ ರೈ ಕುಮಿಟೆಯಲ್ಲಿ ಚಿನ್ನದ ಪದಕವನ್ನು ಗಳಿಸಿರುತ್ತಾರೆ.

ಈ ಕರಾಟೆ ಕ್ರೀಡಾಕೂಟದಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 2500ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಇವರು ಪುತ್ತೂರಿನ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್
ಅಲೈಡ್ ಆರ್ಟ್ಸ್ನ ಸದಸ್ಯನಾಗಿದ್ದು ಸುರೇಶ್ ಅವರಿಂದ ತರಬೇತು ಪಡೆಯುತ್ತಿದ್ದಾರೆ. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಪುತ್ತೂರಿನ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದು, ವಿನೋದ್ ರೈ ಮತ್ತು ಅಕ್ಷತಾ ರವರ ಪುತ್ರ.

LEAVE A REPLY

Please enter your comment!
Please enter your name here