ಪುತ್ತೂರು: ಕಾರು ತಯಾರಿಕೆ ಹಾಗೂ ಮಾರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಮಾರುತಿ ನೆಕ್ಸಾ, ತನ್ನ ಡೀಲರ್ ಭಾರತ್ ನೆಕ್ಸಾ ಸಹಭಾಗಿತ್ವದಲ್ಲಿ ಎರಡು ದಿನಗಳ ಬೃಹತ್ ಗ್ರಾಮೀಣ ಮಹೋತ್ಸವವನ್ನು ಇಲ್ಲಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ಮುಂಭಾಗದಲ್ಲಿ ಜು.17 ರಂದು ಪ್ರಾರಂಭಿಸಿದ್ದು, ಜು.18 ರಂದು ಕೊನೆಯಾಗಲಿದೆ.
ಯುವ ಪೀಳಿಗೆಯನ್ನು ಹೆಚ್ಚು ಆಕರ್ಷಿಸಿ, ಮನ ಗೆದ್ದಿರುವ ಅಚ್ಚು ಮೆಚ್ಚಿನ ಇಗ್ನೀಸ್ ಕಾರು ಖರೀದಿಗೆ 57 ಸಾವಿರ ರೂಪಾಯಿಗಳವರೆಗಿನ ಬೃಹತ್ ಲಾಭದ ಘೋಷಣೆಯನ್ನು ಮಾಡಿದ್ದು, ಬೆಲೆನೋ ಕಾರಿನಲ್ಲೂ ರೂಪಾಯಿ 38 ಸಾವಿರಕ್ಕೂ ಮೇಲಿನ ಲಾಭದ ಕೊಡುಗೆ ನೀಡಿದೆ. ಎಲ್ಲಾ ವರ್ಗದ ಗ್ರಾಹಕರ ಸಹಿತ ಶಿಕ್ಷಕ ವೃಂದಕ್ಕೂ ಅದ್ಬುತ ಕೊಡುಗೆಗಳನ್ನೂ ನೀಡಿದ್ದು, ಕಾರ್ಪೋರೆಟ್ ರಿಯಾಯಿತಿ ಮತ್ತು ಹೆಚ್ಚುವರಿ ಲಾಭವೂ ಇದೀಗ ಸಿಗಲಿದೆ. ನೂರರಷ್ಟು ಅತೀ ಸರಳ ಹಾಗೂ ಸುಲಭ ಸಾಲ ಸೌಲಭ್ಯ, ಹಳೇ ಕಾರಿನ ವಿನಿಮಯಕ್ಕೂ ಉತ್ತಮ ಕೊಡುಗೆಯನ್ನೂ ಕೂಡ ನೆಕ್ಸಾ ಭಾರತ್ ಘೋಷಣೆ ಮಾಡಿದೆ.
ಅರ್ಬನ್ ಎಸ್ಯುವಿ ಕಾರು ಖರೀದಿಗೆ ಮತ್ತೊಮ್ಮೆ ಅವಕಾಶ ತೆರೆದುಕೊಂಡಿದ್ದು, ನೌಕರರು, ಶಿಕ್ಷಕರು ಹಾಗೂ ಕಾರ್ಪೊರೇಟ್ ಉದ್ಯೋಗಿಗಳಿಗೂ ಅತ್ಯಾಧಿಕ ಲಾಭದ ಯೋಜನೆ ಸಂಸ್ಥೆ ಘೋಷಣೆ ಮಾಡಿದ್ದು, ಸದ್ಯವೇ ಕಾರುಗಳ ಬೆಲೆಯೂ ಕೂಡಾ ಏರಿಕೆ ಕಾಣಲಿದೆ. ಮಹೋತ್ಸವದಲ್ಲಿ ಫ್ರಾಂಕ್ಸ್ ಕಾರಿನ ಟೆಸ್ಟ್ ಡ್ರೈವ್ ಲಭ್ಯವಿದ್ದು, ಕಾರು ಪ್ರಿಯರು ಇವೆಲ್ಲದರ ಲಾಭ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತೆ ಹೆಚ್ಚಾಗಲಿದೆ ಎಲ್ಲಾ ಕಾರು ದರ್
ಭಾರತ್ ನೆಕ್ಸಾ ತನ್ನ ಇಗ್ನೀಸ್, ಬೆಲೆನೋ ಕಾರು ಖರೀದಿಗೆ ಭರಪೂರ ಕೊಡುಗೆ ಜೊತೆಗೆ ಹಲವು ರೀತಿಯ ಯೋಜನೆಗಳನ್ನೂ ಘೋಷಣೆ ಮಾಡಿದ್ದು, ನೂತನ ರಸ್ತೆ ತೆರಿಗೆ ನಿಯಮದಿಂದ ಕೆಲ ದಿನಗಳಲ್ಲೇ ಕಾರು ಬೆಲೆಯೂ ಏರಿಕೆ ಕಾಣಲಿದೆ. ಮೇಲಿನ ಕೊಡುಗೆ ಸೀಮಿತ ಅವಧಿವರೆಗೆಂದು ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ -7624893030, 9620893030 ಕರೆ ಮಾಡಬಹುದು.