ಅಧ್ಯಕ್ಷ: ಪದ್ಮನಾಭ ರೈ, ಪ್ರ.ಕಾರ್ಯದರ್ಶಿ: ಅಂಕಿತ್ ರೈ, ಕೋಶಾಧಿಕಾರಿ: ರಾಜ್ಪ್ರಕಾಶ್ ರೈ
ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಮಹಾಸಭೆಯು ಜು.16ರಂದು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಅಧ್ಯಕ್ಷತೆಯಲ್ಲಿ ಮಂದಿರದ ಸಭಾಂಗಣದಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ರೈ ಅರೆಪ್ಪಾಡಿಯವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಅಶೋಕ್ ಪೂಜಾರಿ ಬಡಕ್ಕೋಡಿ ಪ್ರಾರ್ಥಿಸಿದರು. ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಈ ಸಂದರ್ಭದಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ಮಾಜಿ ಅಧ್ಯಕ್ಷರುಗಳಾದ ಶ್ಯಾಮ್ಸುಂದರ ರೈ ಕೊಪ್ಪಳ, ಕುಂಬ್ರ ದುರ್ಗಾಪ್ರಸಾದ್ ರೈಯವರನ್ನು ಚುನಾವಣಾ ಅಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಭಜನಾ ಮಂದಿರದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪದ್ಮನಾಭ ರೈ ಅರೆಪ್ಪಾಡಿ, ಉಪಾಧ್ಯಕ್ಷರಾಗಿ ಮೋನಪ್ಪ ಪೂಜಾರಿ ಬಡಕ್ಕೋಡಿ, ಪ್ರಧಾನ ಕಾರ್ಯದರ್ಶಿ ಅಂಕಿತ್ ರೈ ಕುಯ್ಯಾರು, ಜತೆ ಕಾರ್ಯದರ್ಶಿ ಆಶಾಲತಾ ರೈ ಕುಂಬ್ರ, ಕೋಶಾಧಿಕಾರಿಯಾಗಿ ರಾಜ್ಪ್ರಕಾಶ್ ರೈ ಕುಂಬ್ರ, ಗೌರವ ಲೆಕ್ಕ ಪರಿಶೋಧಕರಾಗಿ ಚಂದ್ರಕಾಂತ ಶಾಂತಿವನರವರುಗಳನ್ನು ಆಯ್ಕೆ ಮಾಡಲಾಯಿತು. ವಿವಿಧ ಕಾರ್ಯಕ್ರಮಗಳಿಗೆ ಸಂಚಾಲಕರುಗಳನ್ನು ಆಯ್ಕೆ ಮಾಡಲಾಯಿತು. ವಾರದ ಭಜನೆಗೆ ಜಗನ್ನಾಥ ಪೂಜಾರಿ ಮುಡಾಲ ಮತ್ತು ಅಶೋಕ್ ಪೂಜಾರಿ ಬಡೆಕ್ಕೋಡಿ, ಶ್ರೀ ಕೃಷ್ಣ ಜನ್ಮಾಷ್ಠಮಿಗೆ ಪುರಂದರ ರೈ ಕುಯ್ಯಾರು, ಕನ್ಯಾ ಸಂಕ್ರಮಣಕ್ಕೆ ರಾಜೇಶ್ ರೈ ಪರ್ಪುಂಜ, ವಾರ್ಷಿಕೋತ್ಸವ ಪೂಜೆಗೆ ಆದರ್ಶ ಶೆಟ್ಟಿ ನೀರಳ, ವಾರ್ಷಿಕ ಭಜನೆಗೆ ಹರೀಶ್ ರೈ ಮುಗೇರು, ವಾರ್ಷಿಕ ಯಕ್ಷಗಾನಕ್ಕೆ ಸಂತೋಷ್ ರೈ ಕುಂಬ್ರ, ಆಯುಧ ಪೂಜೆಗೆ ಮೇಘರಾಜ್ ರೈ ಮುಡಾಲರವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಗೆ ಪುರಂದರ ಶೆಟ್ಟಿ ಮುಡಾಲ, ಚಂದ್ರಶೇಖರ ಬೊಳ್ಳಾಡಿ, ಮೇಘರಾಜ ರೈ ಮುಡಾಲ, ಚಿರಾಗ್ ರೈ ಬೆದ್ರುಮಾರು, ಮಾಧವ ರೈ ಕುಂಬ್ರ, ಸಲಹಾ ಸಮಿತಿಗೆ ಶ್ಯಾಮಸುಂದರ ರೈ ಕೊಪ್ಪಳ, ಬಾಬು ಪೂಜಾರಿ ಬಡೆಕ್ಕೋಡಿ, ಗಂಗಾಧರ ರೈ ಕುಯ್ಯಾರು, ಶೇಖರ ರೈ ಕುರಿಕ್ಕಾರ, ಉಮೇಶ್ ಬರೆಮೇಲು, ದುರ್ಗಾಪ್ರಸಾದ್ ರೈ ಕುಂಬ್ರ, ವಿಶ್ವನಾಥ ರೈ ಕೋಡಿಬೈಲು, ಅರುಣ ರೈ ಬಿಜಳ, ರಾಜೇಶ್ ರೈ ಪರ್ಪುಂಜ ಮತ್ತು ಎಂ.ಎಸ್.ಕೇಶವ ಶಾಂತಿವನರವರುಗಳನ್ನು ಆಯ್ಕೆ ಮಾಡಲಾಯಿತು.