ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಗ್ರಾಮದ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಪ್ರಹ್ಲಾದ್ ಜೆ ಶೆಟ್ಟಿ ಚಂದ್ರಯಾನ -3ರ ಉಡಾವಣೆಯ ಕಾರ್ಯವನ್ನು ಪ್ರಶಂಸಿಸಿ, ಭಾರತವನ್ನು ಗುರುತಿಸುವ ಕೆಲಸ ನಮ್ಮ ವಿಜ್ಞಾನಿಗಳಿಂದಾಗುತ್ತಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಅಂತಹ ವಿಜ್ಞಾನಿಗಳಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನೇರಳಕಟ್ಟೆ ಸರಕಾರಿ ಪ್ರೌಢಶಾಲಾ ವಿಜ್ಞಾನ ಅಧ್ಯಾಪಕರಾದ ಸುಧಾಕರ ಶೆಟ್ಟಿಯವರು ಮಾತನಾಡಿ ಹೊಸ ತಂತ್ರಜ್ಞಾನ ಯುಗದಲ್ಲಿ ಸಮೂಹ ಮಾಧ್ಯಮಗಳನ್ನು ಅವಶ್ಯಕತೆಗಳಿಗೆ ತಕ್ಕಂತೆ ಉಪಯೋಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿರುವುದು ಶ್ಲಾಘನೀಯ ಎಂದರು.
ಆಡಳಿತ ಅಧಿಕಾರಿ ರವೀಂದ್ರ ಡಿ. ರವರು ಮಾತನಾಡಿ ನಮ್ಮ ಪರಿಸರವೇ ಒಂದು ಪ್ರಯೋಗಾಲಯವಾಗಿದೆ. ಪ್ರಶ್ನಿಸುವ ಕೌಶಲ್ಯ ಮತ್ತು ಉತ್ತರವನ್ನು ಕಂಡುಕೊಳ್ಳಲು ನಡೆಸುವ ಪ್ರಯತ್ನವೇ ನಮ್ಮ ವಿಜ್ಞಾನ ಸಂಘ ‘ಅನ್ವೇಷ್’ ಆಗಿದೆ” ಎಂದರು.
ಬಳಿಕ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ವಿಜ್ಞಾನ ಸಂಘದ ಸಂಯೋಜಕರಾದ ಸುಧಾ ಮತ್ತು ಪ್ರಿಯದರ್ಶಿನಿ ಉಪಸ್ಥಿತರಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಭುವಿ ಸ್ವಾಗತಿಸಿ, ಅನಿಷಾ ಆರ್ ವಂದಿಸಿ, ಸಹ ಶಿಕ್ಷಕಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.