ಪುತ್ತೂರು: ತ್ಯಾಗ ಮತ್ತು ಸೇವೆ ಅಂತರ್ ರಾಷ್ಟ್ರೀಯ ರೋಟರಿ ಸಂಸ್ಥೆಯ ಧ್ಯೇಯವಾಗಿದೆ. ಪ್ರಸ್ತುತ ವರ್ಷ ಮತ್ತಷ್ಟು ಸಮಾಜ ಸೇವೆಯನ್ನು ಮಾಡುವ ಮುಖೇನ ಜಗತ್ತಿನಲ್ಲಿ ಭರವಸೆಯನ್ನು ಮೂಡಿಸಬೇಕಾದರೆ ನಮ್ಮಲ್ಲಿ ಸೇವೆ ಮಾಡುವ ಹೃದಯವಂತಿಕೆ, ಬುದ್ಧಿವಂತಿಕೆ ಹಾಗೂ ಪರಸ್ಪರ ಕೈಜೋಡಿಸುವ ಮನಸ್ಸು ಇದ್ದಾಗ ದೇಶ ಅಭಿವೃದ್ಧಿ ಪಥದತ್ತ ಸಾಗಬಲ್ಲುದು ಎಂದು ಪದಪ್ರದಾನ ಅಧಿಕಾರಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಹೇಳಿದರು.
ಜ.20ರಂದು ಮಂಜಲ್ಪಡ್ಪು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಿ ಅವರು ಮಾತನಾಡಿದರು. ಕಳೆದ 118 ವರ್ಷಗಳಿಂದ ರೋಟರಿ ಸಂಸ್ಥೆಯ ಮೂಲಕ ರೊಟೇರಿಯನ್ಸ್ಗಳು ಸ್ವ-ಹಿತ ಮೀರಿದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಇಡೀ ವಿಶ್ವದಲ್ಲಿಯೇ ಜನಮಾನಸದಲ್ಲಿ ಉಳಿಯುವಂತಹ ಸಮಾಜ ಸೇವೆಯು ರೋಟರಿಯಿಂದ ಆಗಿದೆ ಎಂದರು.
ಫಲಾನುಭವಿಗಳ ಪಾಲಿಗೆ ‘ದೇವರು’ ಎನಿಸಿಕೊಳ್ಳುವುದು ಭಾಗ್ಯ-ರವೀಂದ್ರ ರೈ:
ಮುಖ್ಯ ಅತಿಥಿ ರೋಟರಿ 3181 ಜಿಲ್ಲಾ ಸಮಿತಿಯ ಮೆಂಬರ್ಶಿಪ್ ಓರಿಯೆಂಟೇಶನ್ ಚೆಯರ್ಮ್ಯಾನ್ ಬಿ.ಕೆ ರವೀಂದ್ರ ರೈ ಮಾತನಾಡಿ, ಅಂತರ್ರಾಷ್ಟೀಯ ರೋಟರಿ ಮುಖಾಂತರ ರೊಟೇರಿಯನ್ಸ್ಗಳು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಫಲಾನುಭವಿಗಳ ಪಾಲಿಗೆ ‘ದೇವರು’ ಎನಿಸಿಕೊಳ್ಳುವುದು ಬಹು ದೊಡ್ಡ ಭಾಗ್ಯವಾಗಿದೆ. ಸೇವೆ ಅಂದರೆ ಕಲೆ. ರೋಟರಿ ಜಿಲ್ಲಾ ಪ್ರಾಜೆಕ್ಟ್ ಎನಿಸಿದ ಅಂಗನವಾಡಿ ಮಕ್ಕಳಲ್ಲಿ ಮಾನಸಿಕ ಆರೋಗ್ಯ ವೃದ್ಧಿಗೊಳಿಸುವುದು, ಅವರಲ್ಲಿ ಸಕರಾತ್ಮಕ ಭಾವನೆಯನ್ನು ಭಿತ್ತುವುದು ಪ್ರಮುಖ ಸೇವೆಯಾಗಿದೆ ಎಂದರು.
ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು-ಪುರಂದರ ರೈ:
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿರವರು ಕ್ಲಬ್ ಬುಲೆಟಿನ್ ‘ಸ್ವರ್ಣದ್ವೀಪ’ ಅನಾವರಣಗೊಳಿಸಿ ಮಾತನಾಡಿ, ಜೀವನದಲ್ಲಿ ಯಾರು ಒಗ್ಗಟ್ಟಾಗಿ ಕೈ ಕೈ ಹಿಡಿದುಕೊಂಡು ಸಾಗುತ್ತಾರೋ ಅವರು ಎಂತಹ ಸಾಗರವನ್ನು ಕೂಡ ದಾಟಬಲ್ಲರು ಎಂಬುದು ನಿಜವಾದ ಮಾತಾಗಿದೆ. ಸಮಾಜದ ಸಮಗ್ರ ಅಭಿವೃದ್ಧಿಯಾಗಬೇಕು, ಆರೋಗ್ಯಪೂರ್ಣ ಸಮಾಜ ಬೆಳೆಸಬೇಕಾದರೆ ಅಂಗನವಾಡಿಯಲ್ಲಿನ ಮಕ್ಕಳ ವಿದ್ಯಾಭ್ಯಾಸ, ಪೌಷ್ಟಿಕ ಆಹಾರದೊಂದಿಗೆ ಉತ್ತಮ ಪರಿಸರದ ನಿರ್ಮಾಣದ ಜೊತೆಗೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ನಾವೆಲ್ಲ ಜೊತೆಗೂಡಿ ಸಾಗಬೇಕಾಗಿದೆ ಎಂದರು.
ರೋಟರಿಯಿಂದ ಸ್ನೇಹ, ಒಡನಾಟ ವೃದ್ಧಿ-ಭಾಸ್ಕರ ಕೋಡಿಂಬಾಳ:
ರೋಟರಿ ವಲಯ ಸೇನಾನಿ ಕೆ ಭಾಸ್ಕರ ಕೋಡಿಂಬಾಳರವರು ಮಾತನಾಡಿ, ರೋಟರಿ ಕ್ಲಬ್ನಲ್ಲಿ ಸದಸ್ಯನಾದವರಿಗೆ ವಿವಿಧ ವೃತ್ತಿಯಲ್ಲಿನ ರೋಟರಿ ಸದಸ್ಯರ ಪರಿಚಯವಾಗುವ ಮೂಲಕ ಸ್ನೇಹ ಹಾಗೂ ಒಡನಾಟ ವೃದ್ಧಿಯಾಗುತ್ತದೆ. ರೋಟರಿ ಮುಖೇನ ಕೆಲವು ರೊಟೇರಿಯನ್ಸ್ಗಳು ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್ಗೆ ಕೋಟಿ ಹಣವನ್ನು ಸಮಾಜಮುಖಿ ಸೇವೆಗೆ ಅರ್ಪಿಸಿರುವುದು ಶ್ಲಾಘನೀಯ ಎಂದರು.
ಪ್ರತಿ ಹೆಜ್ಜೆಯಲ್ಲಿ ಸಹಕರಿಸಿರುವುದರಿಂದ ಯಶಸ್ವಿಯತ್ತ ಸಾಗಲು ಸಾಧ್ಯವಾಯಿತು-ವೆಂಕಟ್ರಮಣ ಗೌಡ:
ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಕಳೆದ ವರ್ಷ ರೋಟರಿ ಸ್ವರ್ಣ ಅಧ್ಯಕ್ಷನಾಗಿ ರಂಗಪ್ರವೇಶ ಮಾಡಿ ಕುಣಿದು ಕುಪ್ಪಳಿಸಿದ್ದೇನೆ. ಎಲ್ಲೂ ತಾಳ ತಪ್ಪಲಿಲ್ಲ. ಯಾಕೆಂದರೆ ಕ್ಲಬ್ ಸದಸ್ಯರು ನನ್ನೊಂದಿಗೆ ಪ್ರತಿಯೊಂದು ಹೆಜ್ಜೆಯಲ್ಲಿ ಸಹಕರಿಸಿರುವುದರಿಂದ ಯಶಸ್ವಿಯತ್ತ ಸಾಗಲು ಸಾಧ್ಯವಾಯಿತು. ರೋಟರಿ ಸದಸ್ಯರು ಸತ್ಯ ಹಾಗೂ ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿ ಸಾಗಿದಾಗ ಅದು ಅರ್ಥಪೂರ್ಣವಾಗಿರುತ್ತದೆ ಮತ್ತು ಮಾನವೀಯ ಮೌಲ್ಯವನ್ನು ಒಳಗೊಂಡಿರುತ್ತದೆ ಎಂದರು.
ಕ್ಲಬ್ಗೆ ಫ್ಲಾಟಿನಂ ಫ್ಲಸ್ ಪ್ರಶಸ್ತಿ ಬರಲಿ-ಚಿದಾನಂದ ಬೈಲಾಡಿ:
ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ಕಳೆದ ವರ್ಷ ಕ್ಲಬ್ ಹಿರಿಯರಾದ ವೆಂಕಟ್ರಮಣ ಗೌಡ ಕಳುವಾಜೆರವರ ನೇತೃತ್ವದಲ್ಲಿ ಉತ್ತಮ ಸಮಾಜಮುಖಿ ಕಾರ್ಯ ನಿರ್ವಹಿಸಿ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾಗಿತ್ತು. ಪ್ರಸ್ತುತ ವರ್ಷ ಅಧ್ಯಕ್ಷ ಸುಂದರ್ ರೈಯವರ ಮುಂದಾಳತ್ವದಲ್ಲಿ ಕ್ಲಬ್ ಮತ್ತಷ್ಟು ಸಾಧನೆ ಮಾಡಿ ಪ್ಲಾಟಿನಂ ಫ್ಲಸ್ ಪ್ರಶಸ್ತಿಗೆ ಭಾಜನವಾಗಲಿ ಎಂದರು.
ನೂತನ ಸದಸ್ಯೆ ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರ ಪತ್ನಿ ಪುಷ್ಪಾವತಿ ಗೌಡ ಕಳುವಾಜೆ ಇವರನ್ನು ಪದಪ್ರದಾನ ಅಧಿಕಾರಿ ಜೈರಾಜ್ ಭಂಡಾರಿಯವರು ರೋಟರಿ ಪಿನ್ ತೊಡಿಸಿ ಕ್ಲಬ್ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಸನ್ಮಾನ/ಅಭಿನಂದನೆ:
ವೊಕೇಶನಲ್ ಸರ್ವಿಸ್ ವತಿಯಿಂದ ಕಾವು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ಗಣೇಶ್ ರೈ ಸಾಂತ್ಯ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಉತ್ತಮ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಸುರೇಶ್ ಪಿ.ರವರಿಗೆ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕ್ಲಬ್ ಸದಸ್ಯರಾಗಿದ್ದು ರೋಟರಿ ಜಿಲ್ಲೆ 3181ರ ವಲಯ ಐದಕ್ಕೆ ಆಯ್ಕೆಯಾಗಿರುವ ಕೆ.ಭಾಸ್ಕರ ಕೋಡಿಂಬಾಳ, ಸೆನೋರಿಟಾ ಆನಂದ್, ವೆಂಕಟ್ರಮಣ ಗೌಡ ಕಳುವಾಜೆರವರಿಗೆ ಹೂ ನೀಡಿ ಅಭಿನಂದಿಸಲಾಯಿತು.
ವಾಟರ್ ಬೆಡ್/ಹೊಲಿಗೆ ಯಂತ್ರ ಹಸ್ತಾಂತರ:
ಕಮ್ಯೂನಿಟಿ ಸರ್ವಿಸ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವಸಂತ ನಾಯ್ಕ ಎಂಬವರಿಗೆ ವಾಟರ್ ಬೆಡ್ ಹಾಗೂ ಪುಷ್ಪಾವತಿ ಮುಕ್ವೆ ಎಂಬ ಮಹಿಳೆಗೆ ಜೀವನಾಧಾರಕ್ಕೆ ಹೊಲಿಗೆ ಯಂತ್ರವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಪಿ.ಎಚ್.ಎಫ್ ಕೊಡುಗೆ:
ಅಂತರ್ರಾಷ್ಟ್ರೀಯ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿಗೆ ಭಾಜನರಾದ ಕ್ಲಬ್ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ, ರೋಶನ್ ರೈ ಬನ್ನೂರು, ನೂತನ ಕಾರ್ಯದರ್ಶಿ ಯಶ್ವಂತ್ ಗೌಡ ಕಾಂತಿಲರವರನ್ನು ಅಭಿನಂದಿಸಲಾಯಿತು.
ಅಭಿನಂದನೆ/ವಿದ್ಯಾರ್ಥಿವೇತನ/ಪುಸ್ತಕ ವಿತರಣೆ:
ಯೂತ್ ಸರ್ವಿಸ್ ವತಿಯಿಂದ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಗಮನಾರ್ಹ ಸಾಧನೆಗೈದ ಕ್ಲಬ್ ಸದಸ್ಯರ ಮಕ್ಕಳಾದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಮಹಾಬಲ ಗೌಡ ಹಾಗೂ ಗಾಯತ್ರಿ ದಂಪತಿ ಪುತ್ರಿ ಪೂರ್ವಿ ಕೆ.ಎಂ ಮತ್ತು ಗೋಪಾಲಕೃಷ್ಣ ಹಾಗೂ ಹರಿಣಾಕ್ಷಿ ದಂಪತಿ ಪುತ್ರಿ ಪ್ರತಿಜ್ಞಾ, ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆ, ರಾಷ್ಟ್ರಮಟ್ಟದ ಈಜು ಸ್ಪರ್ಧೆ, ನ್ಯಾಷನಲ್ ಪೂಲ್ ಲೈಫ್ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಉದಯ ಎ ಹಾಗೂ ರಂಜಿತಾರವರ ಪುತ್ರ ಸಾತ್ವಿಕ್ರವರನ್ನು ಗೌರವಿಸಲಾಯಿತು. ಕ್ಲಬ್ ಅಧ್ಯಕ್ಷ ಸುಂದರ್ ರೈಯವರ ಪ್ರಾಯೋಜಕತ್ವದಲ್ಲಿ ಜಿಡೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ವೈ.ಆತ್ಮಿ ಶೆಟ್ಟಿ, ಒಡಿಯೂರು ಐಟಿಐ ವಿದ್ಯಾರ್ಥಿ ಶ್ರೇಯಸ್, ಸುದಾನ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ನೂತನ್ ಸಿಂಗ್ ರವರಿಗೆ ವಿದ್ಯಾರ್ಥಿವೇತನ ಮತ್ತು ಯು.ಎಸ್.ಎ ಫ್ಲೋರಿಡಾದ ನ್ಯೂ ಟೆಂಪಾನೂನ್ ರೋಟರಿ ಕ್ಲಬ್ನ ಪಿಡಿಜಿ ವಿನಾಯಕ ಕುಡ್ವರವರ ಪ್ರಾಯೋಜಕತ್ವದಲ್ಲಿ ಜಿಲ್ಲಾ ಪಬ್ಲಿಕ್ ಇಮೇಜ್ ಚೇರ್ಮ್ಯಾನ್ ಎ.ಕೆ.ಎಸ್ ವಿಶ್ವಾಸ್ ಶೆಣೈಯವರ ಮುಖಾಂತರ ಅಕ್ಷಯ್ ಭಂಡಾರ್ಕರ್ ಎಂಬ ವಿದ್ಯಾರ್ಥಿಗೆ ರೂ.50 ಸಾವಿರ ವಿದ್ಯಾರ್ಥಿವೇತನವನ್ನು ಮತ್ತು ಮುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ 70 ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬರೆಯುವ ಸಾಮಾಗ್ರಿಗಳನ್ನು ಶಾಲೆಯ ಮುಖ್ಯ ಶಿಕ್ಷಕಿ ಗ್ಲ್ಯಾಡೀಸ್ ಡಾಯಸ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಖಾದರ್ರವರಿಗೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರ ಪತ್ನಿ ಪುಷ್ಪಾವತಿ ಗೌಡ ಕಳುವಾಜೆರವರು ಉಪಸ್ಥಿತರಿದ್ದರು. ಕ್ಲಬ್ ಸದಸ್ಯೆ ಮೀನಾಕ್ಷಿ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ಯಶ್ವಂತ್ ಗೌಡ ಕಾಂತಿಲ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಸುರೇಶ್ ಪಿ ವರದಿ ಮಂಡಿಸಿದರು. ಅತಿಥಿಗಳ ಪರಿಚಯವನ್ನು ಮಹಾಬಲ ಗೌಡ, ಸುರೇಂದ್ರ ಆಚಾರ್ಯ, ಶೀನಪ್ಪ ಪೂಜಾರಿ, ನಾರಾಯಣ ರೈಯವರು ನೀಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ರಾಮಣ್ಣ ರೈ ಕೈಕಾರ, ವೊಕೇಶನಲ್ ಸರ್ವಿಸ್ ನಿರ್ದೇಶಕಿ ಸಂಧ್ಯಾರಾಣಿ ಬೈಲಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ದೀಪಕ್ ಬೊಳ್ವಾರು, ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ಸುಭಾಷ್ ರೈ ಬೆಳ್ಳಿಪ್ಪಾಡಿ, ಯೂತ್ ಸರ್ವಿಸ್ ನಿರ್ದೇಶಕ ವಿಜಯ್ ಡಿ’ಸೋಜ, ಸಾರ್ಜಂಟ್ ಎಟ್ ಆಮ್ಸ್೯ ದಿನೇಶ್ ಆಚಾರ್ಯರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು ಹಾಗೂ ಆಶಾ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.
ಪದಪ್ರದಾನ…
ಕ್ಲಬ್ ನೂತನ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ, ಕಾರ್ಯದರ್ಶಿ ಯಶ್ವಂತ ಗೌಡ ಕಾಂತಿಲ, ಕೋಶಾಧಿಕಾರಿ ಪ್ರವೀಣ್ ಕುಮಾರ್ ರೈ ಸಾಂತ್ಯ, ಉಪಾಧ್ಯಕ್ಷ ಆನಂದ ಮೂವಪ್ಪು, ಜೊತೆ ಕಾರ್ಯದರ್ಶಿ ಸುರೇಂದ್ರ ಆಚಾರ್ಯ, ಸಾರ್ಜಂಟ್ ಎಟ್ ಆಮ್ಸ್೯ ದಿನೇಶ್ ಆಚಾರ್ಯ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಕ್ಲಬ್ ನಿರ್ದೇಶಕ ರಾಮಣ್ಣ ರೈ ಕೈಕಾರ, ವೊಕೇಶನಲ್ ಸರ್ವಿಸ್ ನಿರ್ದೇಶಕ ಸಂಧ್ಯಾರಾಣಿ ಬೈಲಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ದೀಪಕ್ ಬೊಳ್ವಾರು, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕ ಸುಭಾಶ್ ರೈ ಬೆಳ್ಳಿಪ್ಪಾಡಿ, ಯೂತ್ ಸರ್ವಿಸ್ ನಿರ್ದೇಶಕ ವಿಜಯ್ ಡಿ’ಸೋಜ, ಚೇರ್ ಮ್ಯಾನ್ ಗಳಾದ ನಾರಾಯಣ ರೈ ಕೆ.ಪಿ(ಪಲ್ಸ್ ಪೋಲಿಯೊ), ರೋಶನ್ ರೈ ಬನ್ನೂರು(ಟಿ.ಆರ್.ಎಫ್), ದೀಪಕ್ ಮಿನೇಜಸ್(ಜಿಲ್ಲಾ ಪ್ರಾಜೆಕ್ಟ್), ಶೀನಪ್ಪ ಪೂಜಾರಿ(ಸದಸ್ಯತನ ಅಭಿವೃದ್ಧಿ), ಚಂದ್ತಶೇಖರ ಮೂರ್ತಿ(ಟೀಚ್), ಜಯಂತ್ ಶೆಟ್ಟಿ ಕಂಬಳದಡ್ಕ(ವಿನ್ಸ್), ಮೋಹನ್ ಗೌಡ ನೆಲಪ್ಪಾಲ್(ವೆಬ್), ಸೀತಾರಾಮ ಗೌಡ(ಸಿ.ಎಲ್.ಸಿ.ಸಿ), ಮನೋಹರ್ ಕುಮಾರ್(ವಾಟರ್ & ಸ್ಯಾನಿಟೇಶನ್), ಸುನಿಲ್ ಜಾಧವ್(ಪಬ್ಲಿಕ್ ಇಮೇಜ್)ರವರುಗಳಿಗೆ ಪದಪ್ರದಾನ ಅಧಿಕಾರಿ ಜೈರಾಜ್ ಭಂಡಾರಿರವರು ಪದಪ್ರದಾನವನ್ನು ನೆರವೇರಿಸಿದರು.
ಆರೋಗ್ಯವಂತ ಸಮಾಜ ನಿರ್ಮಾಣದ ಗುರಿ…
ಹಿರಿಯರ ಮಾರ್ಗದರ್ಶನ ಹಾಗೂ ಸಹಕಾರದಿಂದ ಕ್ಲಬ್ ಯಶಸ್ವಿಯಾಗಿ ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ಕ್ಲಬ್ ಮತ್ತಷ್ಟು ಗಟ್ಟಿಗೊಳ್ಳಲು ಸದಸ್ಯರ ಸಹಕಾರ ಮತ್ತು ಪ್ರೋತ್ಸಾಹ ಬೇಕಾಗಿದೆ. ಕ್ಲಬ್ನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸಲಿದ್ದು, ಆರೋಗ್ಯವಂತ ಸಮಾಜ ನಿರ್ಮಾಣದ ಕಡೆಗೆ ಹೆಚ್ಚಿನ ಗಮನ ಹರಿಸೋಣ.
-ಸುಂದರ್ ರೈ ಬಲ್ಕಾಡಿ,
ನೂತನ ಅಧ್ಯಕ್ಷರು,
ರೋಟರಿ ಕ್ಲಬ್ ಪುತ್ತೂರು ಸ್ವರ್ಣ