ಪುತ್ತೂರು: ಪುಣಚ ಗ್ರಾಮದ ಮೂಡಂಬೈಲು ಶಾಲಾ ಮಕ್ಕಳು ಗದ್ದೆಗಿಳಿದು ನೇಜಿ ನಾಟಿ ಮಾಡುವ ಮೂಲಕ ಅನ್ನ ಬೆಳೆಯುವ ಶ್ರಮದ ಬಗ್ಗೆ ತಿಳಿಸಿಕೊಡಲಾಯಿತು. ಮೂಡಂಬೈಲು ಪಾವಲುಮೂಲೆಯ ಶಿವರಾಮ ನಾಯ್ಕ ಮತ್ತು ಮನೆಯವರು ತಮ್ಮ ಕುಟುಂಬದ ಸದಸ್ಯರೇ ಸೇರಿ ನೇಜಿ ನೆಟ್ಟು ಗದ್ದೆ ಕೃಷಿ ಮಾಡುತ್ತಿದ್ದು, ಶಾಲಾ ಮಕ್ಕಳು ಶಿವರಾಮ ನಾಯ್ಕರ ಕುಟುಂಬದವರೊಡನೆ ಸೇರಿ ನೇಜಿ ನೆಡುವುದನ್ನು ಕಲಿತುಕೊಂಡರು. ಕೃಷಿ ಅರಿವನ ಪಾಠ ಮಕ್ಕಳ ಜೀವನವನ್ನು ಬೆಳಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಶಾಲಾ ಮುಖ್ಯಗುರು ಅರವಿಂದ ಕುಡ್ಲರವರು ಈ ಅವಕಾಶವನ್ನು ಮಕ್ಕಳಿಗೆ ಮಾಡಿಕೊಟ್ಟಿದ್ದರು.