ಪುತ್ತೂರು :ಪುತ್ತೂರು ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊoದಾದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ಹಾಗೂ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಎನ್. ಡಿ. ಆರ್. ಎಫ್ ಮಂಗಳೂರು, ಆರ್. ಆರ್. ಸಿ ಬೆಂಗಳೂರು,ಇದರ ಸಹಯೋಗದಲ್ಲಿ ಕಾಲೇಜಿನ ಕ್ರೀಡಾಂಗಣದ ಸುತ್ತಮುತ್ತಲೂ ಗಿಡ ನೆಡುವುದರ ಮೂಲಕ “ವೃಕ್ಷಾರೋಪಣ ಅಭಿಯಾನ”ಕ್ಕೆ ಚಾಲನೆ ನೀಡಿ ವಿದ್ಯಾರ್ಥಿ ಗಳಿಗೆ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ| ಆಂಟನಿ ಪ್ರಕಾಶ್ ಮೊಂತೆರೋ ವೃತ್ತಿಪರತೆ, ಅಪ್ರತಿಮ ಶೌರ್ಯ ಹಾಗೂ ಸಹಾನುಭೂತಿ ಹೊಂದಿರುವ ಉತ್ಸಾಹಿ ಯುವಕರ ತಂಡವಾದ ಎನ್ ಡಿ ಆ ಎಫ್ ನೊಂದಿಗೆ ವೃಕ್ಷಾರೋಪಣ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರವುದು ಸಂತಸ ತಂದಿದೆ. ವ್ಥಕ್ಷಗಳು ಪ್ರಾಕೃತಿಕ ಸಮತೋಲನವನ್ನು ಕಾಪಾಡುತ್ತವೆ. ಹಸಿರು ಸಮೃದ್ಧಿಯ ಸಂಕೇತವಾಗಿದೆ. ವಿದ್ಯಾಸಂಸ್ಥೆ ಸುತ್ತುಮುತ್ತಲೂ ಹಸಿರಿನಿಂದ ಕೂಡಿದಲ್ಲಿ ಧನಾತ್ಮಕತೆ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಎನ್. ಡಿ. ಆರ್. ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ) ಮಂಗಳೂರು, ಆರ್. ಆರ್. ಸಿ (ಪ್ರಾದೇಶಿಕ ರಕ್ಷಣಾ ಕೇಂದ್ರ )ಬೆಂಗಳೂರು ಇದರ ಟೀಮ್ ಕಮಾಂಡರ್ ಶಿವ ಕುಮಾರ್ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಮಾಂಡರ್ ಗಳ ಸಹಕಾರದೊಂದಿಗೆ ಕ್ರೀಡಾಂಗಣದ ಸುತ್ತಮುತ್ತಲೂ ಸಸಿಗಳನ್ನು ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡರ್ ಗಳು, ಸಂತ ಫಿಲೋಮಿನಾ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.