ಉಪ್ಪಿನಂಗಡಿ: ರಾ.ಹೆದ್ದಾರಿ 75ರ ಉಪ್ಪಿನಂಗಡಿಯಲ್ಲಿ ರಸ್ತೆ ಅಗಲೀಕರಣ ವೇಳೆ ಕಟ್ಟಲಾಗಿದ್ದ ಕಾಂಕ್ರೀಟ್ ತಡೆಗೋಡೆ ಮಳೆಗೆ ಕುಸಿದು ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಡೆಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು ಉಳಿದ ಭಾಗವೂ ಕುಸಿದು ಬೀಳುವ ಹಂತದಲ್ಲಿದೆ. ತಡೆಗೋಡೆ ಬಿದ್ದಿರುವ ಕಾರಣ ಮಳೆ ನೀರು ಪಕ್ಕದ ತೋಟಕ್ಕೆ ಹರಿಯುತ್ತಿದ್ದು, ಕೃಷಿ ತೋಟ ನೀರಿನಿಂದ ಆವೃತವಾಗುವ ಸಂಭವ ಇದೆ. ಶಾಸಕರ ಜೊತೆ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ , ಉಪ್ಪಿನಂಗಡಿ ಗ್ರಾ.ಪಂ ಪಿಡಿಒ ವಿಲ್ಫ್ರೆಡ್ ಉಪಸ್ಥಿತರಿದ್ದರು.