ಚಿಕಿತ್ಸೆ ನೀಡುವವರು, ಗುಣಮುಖರಾದವರಿಂದ ಅರಿವು ಮೂಡಿಸವ ಕೆಲಸವಾಗಬೇಕಾಗಿದೆ- ಡಾ. ಮೇಲ್ ವೋಗೆಲಿ
ರೋಗಿಗೆ ಪರಿಣಾಮಕಾರಿ ಚಿಕಿತ್ಸೆ ಸಿಗಬೇಕು – ಡಾ. ಸುರೇಶ್ ಪುತ್ತೂರಾಯ
ಪುತ್ತೂರು: ಭಾರತೀಯ ಆಯುರ್ವೇದ ಚಿಕಿತ್ಸೆ ರೋಗಗಳನ್ನು ತಡೆಗಟ್ಟಲು ಮತ್ತು ಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡಲು ದೇಹ, ಮನಸ್ಸು ಮತ್ತು ಚೈತನ್ಯವನ್ನು ಸಂಯೋಜಿಸುವ ಮತ್ತು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ. ಆದರೆ ಇವತ್ತು ಆಯುರ್ವೇದಲ್ಲೂ ತುರ್ತು ಚಿಕಿತ್ಸೆ ನೀಡಬಹುದೆಂಬ ಚಿಂತನೆ ನಡೆದಿದೆ. ಆಯುರ್ವೇದಿಕ್‌ನ್ನು ಆಲೋಪತಿಯೊಂದಿಗೆ ಸೇರಿಸಿಕೊಂಡು ಹೇಗೆ ಉತ್ತಮ ಚಿಕಿತ್ಸೆ ನೀಡಬಹುದೆಂಬ ವಿಶೇಷ ಕಾರ್ಯಗಾರ ಫ್ರಾನ್ಸ್ ನ ಆಯುರ್ವೇದ ತುರ್ತು ಚಿಕಿತ್ಸಾ ತಜ್ಞ ವೈದ್ಯರ ತಂಡವೊಂದರಿಂದ ಪ್ರಪ್ರಥಮವಾಗಿ ಪುತ್ತೂರು ಸುಶ್ರೂತ ಆಸ್ಪತ್ರೆಯಲ್ಲಿ ಜು.25ರಂದು ನಡೆಯಿತು.
ಚಿಕಿತ್ಸೆ ನೀಡುವವರು, ಗುಣಮುಖರಾದವರಿಂದ ಅರಿವು ಮೂಡಿಸವ ಕೆಲಸವಾಗಬೇಕಾಗಿದೆ:
ಫ್ರಾನ್ಸ್ ನ ತುರ್ತು ವೈದ್ಯಕೀಯ ತಜ್ಞ ಡಾ.ಮೇಲ್ ವೋಗೆಲಿ ಅವರು ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಆಯುರ್ವೇದದ ಮೂಲಕ ತುರ್ತು ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂಬ ಭಾವನೆ ಜನರಿಗಿದ್ದು, ಆಯುರ್ವೇದದಿಂದಲೂ ತುರ್ತು ಚಿಕಿತ್ಸೆಯನ್ನು ನೀಡಬಹುದಾಗಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ಸಾಕಷ್ಟು ಮುಂದುವರಿದಿದ್ದರೂ, ಜನರು ಇದರತ್ತ ಆಸಕ್ತಿಯನ್ನು ತೋರಿಸುತ್ತಿಲ್ಲ. ಈಗಾಗಲೇ ಆಯುರ್ವೇದ ಚಿಕಿತ್ಸೆ ಪಡೆದು ಗುಣಮುಖರಾದವರು, ಚಿಕಿತ್ಸೆ ನೀಡುವವರು ಹಾಗೂ ಆಳವಾದ ಅರಿವು ಹೊಂದಿದವರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ರೋಗಿಗೆ ಪರಿಣಾಮಕಾರಿ ಚಿಕಿತ್ಸೆ ಸಿಗಬೇಕು:
ಮಹಾವೀರ ಮೆಡಿಕಲ್ ಸೆಂಟರ್‌ನ ಡಾ. ಸುರೇಶ್ ಪುತ್ತೂರಾಯ ಅವರು ಅಧ್ಯಕ್ಷತೆ ವಹಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ರೋಗಿಗೆ ಹೇಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಎಂಬುದು ಆಯುರ್ವೇದ ಮತ್ತು ಆಲೋಪತಿ ಜೊತೆಯಾದಾಗ ಉತ್ತಮ ಫಲಿತಾಂಶ ಬರಬಹುದು. ಆಧುನಿಕ ಚಿಕಿತ್ಸೆಗೆ ಈ ಕಾರ್ಯಗಾರ ಮಹತ್ವ ಪಡೆಯಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ತಜ್ಷರ ತಂಡದಲ್ಲಿದ್ದ ಬ್ರಹ್ಮದತ್ತನ್ ನಂಭೋದರಿ, ಶಂಕರನ್ ನಂಭೋದರಿ, ಪ್ರದೇಶ್ ಕೆ, ಸ್ಕಾಂತೇಶ್ ಲಕ್ಷ್ಮಣ, ರಿಷಿ ಮಣಿವಾನನ್, ವಿದ್ಯಾ ಅಖಿಲನಾರಾಯಣ್ ಈ ಸಂದರ್ಭದಲ್ಲಿ ಉಪಸ್ಥತರಿದ್ದರು. ಸುಶ್ರೂತ ಆಸ್ಪತ್ರೆಯ ಡಾ. ರವಿಶಂಕರ್ ಪೆರುವಾಜೆ ಸ್ವಾಗತಿಸಿ, ಡಾ. ಶಮೀರ ಕೃಷ್ಣ ಪೆರುವಾಜೆ ವಂದಿಸಿದರು. ಡಾ. ಯಾದವಿ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ನಾಶವಾದ ಭಾರತೀಯ ಪದ್ದತಿಯನ್ನು ಪುನರಪಿ ಉಳಿಸಬೇಕು
ತುರ್ತು ಸಂದರ್ಭ ಆಯುರ್ವೇದ ಚಿಕಿತ್ಸೆ ಹೇಗೆ ಪ್ರಾಮುಖ್ಯತೆ ಪಡೆದಿದೆ ಎಂಬುದು ಮುಖ್ಯ. ಪಕ್ಷಪಾತ, ವಿಷ ಕಡಿತಕ್ಕೊಳಗಾದಾಗ, ಕೆಲವೊಂದು ನೋವಿನ ಸಮಸ್ಯೆಗೆ ಆಯುರ್ವೇದಲ್ಲಿ ತುರ್ತು ಚಿಕಿತ್ಸೆ ಹೇಗೆ ಮಾಡಬಹುದು ಎಂಬುದು ಬಹು ಅಗತ್ಯ ವಿಚಾರ. ಈ ಕುರಿತು ಫ್ರಾನ್ಸ್ ನ ತುರ್ತು ಚಿಕಿತ್ಸಾ ತಜ್ಞರ ನೇತೃತವದಲ್ಲಿ 15 ಮಂದಿ ತಜ್ಞರು ದೇಶಾದ್ಯಂತ ಕಾರ್ಯಗಾರ ಮಾಡಲಿದ್ದಾರೆ. ಈ ಕುರಿತು ಪುತ್ತೂರಿನಲ್ಲಿ ಪ್ರಥಮ ಕಾರ್ಯಾಗಾರ ಪಕ್ಷಪಾತ ಆದಾಗ ರೋಗಿಗೆ ಯಾವ ರೀತಿಯ ತುರ್ತು ಚಿಕಿತ್ಸೆ ನೀಡಬಹುದು ಎಂಬುದರ ಕುರಿತು ಮಾಹಿತಿ ನಡೆಯಲಿದೆ. ಒಟ್ಟಿನಲ್ಲಿ ಆಯುರ್ವೇದವನ್ನು ಅಲೋಪತಿ ಚಿಕಿತ್ಸೆಗೆ ಸೇರಿಸಿಕೊಂಡು ಹೆಚ್ಚು ಪ್ರಯೋಜನಕಾರಿಯಾಗಿ ರೋಗಿಗೆ ಹೇಗೆ ಚಿಕಿತ್ಸೆ ನೀಡಬಹುದು ಎಂಬುದು ಇಲ್ಲಿ ಮುಖ್ಯವಾಗಿದೆ. ಆಯುರ್ವೇದಲ್ಲಿವ ಸುಮಾರು ತುರ್ತು ಚಿಕಿತ್ಸೆಗಳು ಈಗಿನ ಕಾಲದಲ್ಲಿ ನಶಿಸಿ ಹೋಗಿದೆ. ಭಾರತೀಯ ಪದ್ಧತಿಯಲ್ಲಿರುವ ನಾಶವಾದಾಗ ಈ ಚಿಕಿತ್ಸಾ ಪದ್ಧತಿಯನ್ನು ಪುನರಪಿ ಮಾಡುವಲ್ಲಿ ಪ್ರಯತ್ನ ನಡೆಯುತ್ತಿದೆ.
ಡಾ. ರವಿಶಂಕರ್ ಪೆರುವಾಜೆ