ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆ ನಿವಾಸಿ, ಪ್ರಗತಿಪರ ಕೃಷಿಕ ಪಾಂಡೇಲುಗುತ್ತು ರಾಮಣ್ಣ ರೈಯವರ ಉತ್ತರಕ್ರಿಯೆಯು ಜು. 25 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ, ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡರವರು ಮಾತನಾಡಿ ರಾಮಣ್ಣ ರೈಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸಮಾಜ ಮತ್ತು ಕುಟುಂಬದಲ್ಲಿ ಆದರ್ಶಯುತ ಜೀವನವನ್ನು ನಡೆಸಿಕೊಂಡು ಬಂದಿದ್ದರು, ಅವರು ಉತ್ತಮ ಕೃಷಿಕನಾಗಿಯೂ ಹೆಸರನ್ನು ಪಡೆದಿದ್ದರು. ಅವರ ಆದರ್ಶ ಜೀವನ ಇಂದಿನ ಯುವ ಪೀಳಿಗೆ ಅನುಸರಿಸಿಕೊಂಡು ಬದುಕು ಸಾಗಿಸಬೇಕು ಎಂದು ನುಡಿನಮನ ಸಲ್ಲಿಸಿದ್ದರು.
ರಾಮಣ್ಣ ರೈಯವರ ಪತ್ನಿ ವಾರಿಜಾ ರೈ, ಮಕ್ಕಳಾದ ವನಜಾಕ್ಷಿ ಎಸ್. ಶೆಟ್ಟಿ ಪೂನಾ, ಶಿವಪ್ರಸಾದ್ ರೈ ಸಾರಕರೆ, ಹರಿಣಾಕ್ಷಿ ವಿ.ರೈ ಬೆಂಗಳೂರು, ಅಳಿಯಂದಿರಾದ ಸುಧಾಕರ ಸಿ.ಶೆಟ್ಟಿ ಪೂನಾ, ವಿಜಯಕುಮಾರ್ ರೈ ಸರ್ವೆ ಬೆಂಗಳೂರು, ಸೊಸೆ ಸ್ವಾತಿ ಎಸ್.ರೈ, ಮೊಮ್ಮಕ್ಕಳಾದ ಆಧ್ಯಾ ಶೆಟ್ಟಿ, ಲಿಧ್ಯಾ ಶೆಟ್ಟಿ, ಆರ್ಯನ್ ರೈ, ಯದ್ವಿ ರೈ, ಯಾಹಾನ್ ರೈ, ಯದಿರಾ ರೈ ಹಾಗೂ ಸಹೋದರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ಉದ್ಯಮಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಊರ ಮತ್ತು ಪರವೂರ ಹಿತೈಷಿಗಳು ಭಾಗವಹಿಸಿದ್ದರು.