ಕಾಣಿಯೂರು ಪ್ರಗತಿಗೆ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಹಲವು ಬಹುಮಾನ

0

ಕಾಣಿಯೂರು : ದ ಕ ಜಿ ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರಿನಲ್ಲಿ ಜು.24 ರಂದು ನಡೆದ ಸವಣೂರು ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು ಬಂದಿರುತ್ತದೆ . ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶಮಂತ್ (7ನೇ) 4ನೇ ಸ್ಥಾನ, ಬಾಲಕಿರ ವಿಭಾಗದಲ್ಲಿ ಸಾನ್ವಿಕ ಎಚ್ (7ನೇ) ಪ್ರಥಮ ಸ್ಥಾನ, ಎಂಟನೇ ತರಗತಿ ವಿಭಾಗದಲ್ಲಿ ನಿತೀಶ್ ಬಿ ದ್ವಿತೀಯ ಸ್ಥಾನ, ಪ್ರೌಢಶಾಲೆ ಬಾಲಕರ ವಿಭಾಗದಲ್ಲಿ ರಂಜನ್ ವಿ (10ನೇ ) ದ್ವಿತೀಯ ಸ್ಥಾನ ಹಾಗೂ ರೀತೀಶ್ ಬಿ (10ನೇ) ಐದನೇ ಸ್ಥಾನ ಮತ್ತು ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಪೃಥ್ವಿ ಎಂ (8ನೇ) ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ , ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಾಳ, ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here