ಅಧ್ಯಕ್ಷ; ಪಿ.ಡೆನ್ನಿಸ್ ಪಿಂಟೋ, ಉಪಾಧ್ಯಕ್ಷ: ಶಶಿಧರ ಗೌಡ
ನೆಲ್ಯಾಡಿ: ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ೫ ವರ್ಷಗಳ ಅವಧಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಸಂಘದ ಅಧ್ಯಕ್ಷರಾಗಿ ಪಿ.ಡೆನ್ನಿಸ್ ಪಿಂಟೋ ಪುಯಿಲ ಹಾಗೂ ಉಪಾಧ್ಯಕ್ಷರಾಗಿ ಶಶಿಧರ ಗೌಡ ಮುದ್ಯರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸಾಮಾನ್ಯ ಮೀಸಲು ಸ್ಥಾನದಿಂದ ಹರಿಶ್ಚಂದ್ರ ಗೌಡ ಮುದ್ಯ, ರವೀಂದ್ರ ಗೌಡ ಮುದ್ಯ, ನಾರಾಯಣ ಕೆಳಗಿನಮನೆ, ರುಕ್ಮಯ್ಯ ಗೌಡ ಪುಯಿಲ, ಪಿ.ಡೆನ್ನಿಸ್ ಪಿಂಟೋ ಪುಯಿಲ, ಸುರೇಶ್ ಬಿದಿರಾಡಿ, ಉಮೇಶ್ ಗೌಡ ನೆಕ್ಕರೆ ಆಯ್ಕೆಗೊಂಡಿದ್ದಾರೆ. ಮಹಿಳಾ ಮೀಸಲು ಸ್ಥಾನದಿಂದ ರತ್ನಾವತಿ ನಾಯಿಲ, ವಸಂತಿ ಬೇರಿಕೆ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಶ್ರೀಧರ ಬರಮೇಲು, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಶಶಿಧರ ಗೌಡ ಮುದ್ಯ, ಅನುಸೂಚಿತ ಜಾತಿ ಮೀಸಲು ಸ್ಥಾನದಿಂದ ಹೊನ್ನಮ್ಮ ನೂಜೋಲು, ಪ್ರೇಮ ನೂಜೋಲು ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ/ಉಪಾಧ್ಯಕ್ಷರ ಅವಿರೋಧ ಆಯ್ಕೆ:
ಜು.22ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಪಿ.ಡೆನ್ನಿಸ್ ಪಿಂಟೋ ಪುಯಿಲ ಹಾಗೂ ಉಪಾಧ್ಯಕ್ಷರಾಗಿ ಶಶಿಧರ ಗೌಡ ಮುದ್ಯ ಅವಿರೋಧವಾಗಿ ಆಯ್ಕೆಗೊಂಡರು. ಪಿ.ಡೆನ್ನಿಸ್ ಪಿಂಟೋ ಅವರು ಈ ಹಿಂದೆ 8 ವರ್ಷ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕ ಬಿ.ನಾಗೇಂದ್ರರವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಚಂದ್ರಶೇಖರ ಗೌಡ, ಹಾಲು ಪರೀಕ್ಷಕಿ ಭವಾನಿ, ಸಹಾಯಕ ನಿತೀಶ ಎ.,ರವರು ಸಹಕರಿಸಿದರು.