ಉಪ್ಪಿನಂಗಡಿ: ಸತತ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ಮೈದುಂಬಿ ಹರಿಯುತ್ತಿದ್ದು, ಬುಧವಾರದಂದು ಸತತ ಇಳಿಮುಖವನ್ನು ದಾಖಲಿಸುತ್ತಾ ಹೋಗಿರುವ ನದಿಯು ಬುಧವಾರ ರಾತ್ರಿಯ ವೇಳೆಗೆ ಅಪಾಯದ ಮಟ್ಟಕಿಂತ ನಾಲ್ಕು ಮೀಟರ್ ಕೆಳಗೆ ಹರಿಯುತ್ತಿದೆ.
ಬುಧವಾರ 27.5 ಮೀಟರ್ ನಲ್ಲಿ ಹರಿಯುವಿಕೆಯ ಗತಿಯನ್ನು ದಾಖಲಿಸಿದ್ದು, ಇಲ್ಲಿ ಅಪಾಯದ ಮಟ್ಟ 31.05 ಮೀಟರ್ ಆಗಿದೆ. ನದಿ ಸಂಗಮ ಸ್ಥಳದಲ್ಲಿ ಪ್ರವಾಹ ರಕ್ಷಣಾ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ಸಂಭಾವ್ಯ ನೆರೆಯ ಬಗ್ಗೆ ನಾಗರಿಕರನ್ನು ಎಚ್ಚರಿಸಲು ಸಿದ್ದರಾಗಿದ್ದಾರೆ.